ಬಾಹುಬಲಿಗೆ 3ನೇ ದಿನದ ಉತ್ಸವಕ್ಕೆ ತೆರೆ: ಸಾರ್ವಜನಿಕ ದರ್ಶನಕ್ಕೆ ಅವಕಾಶ

ಶ್ರವಣಬೆಳಗೊಳ: ಭಗವಾನ್ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ ಮೂರನೇ ದಿನವಾದ ಸೋಮವಾರವೂ ನಡೆಯಿತು. ಬೆಳಗ್ಗೆ 8 ಗಂಟೆಯಿಂದ 1008 ಕಳಶದಿಂದ ಜಲಾಭಿಷೇಕ, ನಂತರ ಪಂಚಾಮೃತ‌ ಅಭಿಷೇಕ, ಅಷ್ಟದ್ರವ್ಯ ಮಹಾಮಂಗಳಾರತಿ ನಡೆಯಿತು. ಬಳಿಕ 3 ನೇ ದಿನದ ಉತ್ಸವ ಸಂಪನ್ನವಾಯಿತು. ಮಧ್ಯಾಹ್ನ 2 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ‌ ಅವಕಾಶ ನೀಡಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು ವಿಶೇಷ. ಮಸ್ತಕಾಭಿಷೇಕದಲ್ಲಿ ಭಾಗಿಯಾದ 4ನೇ ಪ್ರಧಾನಿಯಾಗಿದ್ದಾರೆ. ಈ ಹಿಂದೆ ನೆಹರು, ಇಂದಿರಾಗಾಂಧಿ ಮತ್ತು ನರಸಿಂಹರಾವ್ ಭಾಗಿಯಾಗಿದ್ದರು,

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ