ನವದೆಹಲಿ:ಫೆ-18: ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಹಿಂದಿ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕರನ್ನು ಬಂಧಿಸಿದ್ದಾರೆ.
ಉಮೇಶ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ಮತ್ತು 506ರಡಿಯಲ್ಲಿ ಮತ್ತು ಕ್ರಿಮಿನಲ್ ಪ್ರಕ್ರಿಯೆ ಸೆಕ್ಷನ್ 164ರಡಿಯಲ್ಲಿ ಆರೋಪಿ ವಿರುದ್ಧ ಕೇಸು ದಾಖಲಿಸಲಾಗಿದೆ. ಫೆಬ್ರವರಿ 13ರಂದು ದೆಹಲಿಯ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಕೇಸು ಉಮೇಶ್ ಕುಮಾರ್ ವಿರುದ್ಧ ದೂರು ದಾಖಲಾಗಿತ್ತು.
ಸಂತ್ರಸ್ತೆ ತನ್ನ ದೂರಿನಲ್ಲಿ ಹೇಳಿರುವ ಪ್ರಕಾರ 2016ರಲ್ಲಿ ಝೆನೆಟಿಕ್ಸ್ ಜಿಮ್ ನಲ್ಲಿ ಕೆಲಸ ಮಾಡುತ್ತಿದ್ದಾಗ ದೆಹಲಿಯ ಇಂದಿರಾಪುರಂನಲ್ಲಿ ವಾಸಿಸುತ್ತಿದ್ದೆ. ಆಗ ಉಮೇಶ್ ಕುಮಾರ್ ಅವರ ಪರಿಚಯವಾಯಿತು. ಕಳೆದ ವರ್ಷ ಜೂನ್ ನಲ್ಲಿ ತನ್ನ ನಿವಾಸಕ್ಕೆ ಉಮೇಶ್ ಕುಮಾರ್ ತನ್ನನ್ನು ಬರಲು ಹೇಳಿದರು. ಮದುವೆ ಮಾಡಿಕೊಳ್ಳುವ ನೆಪದಲ್ಲಿ ತಮ್ಮ ಜೊತೆ ದೈಹಿಕ ಸಂಬಂಧ ಬೆಳೆಸಿದರು. ನಂತರ ಆಗಸ್ಟ್ ತಿಂಗಳಲ್ಲಿ ಕ್ಲಾರಿಡ್ಜ್ ಹೊಟೇಲ್ ಗೆ ಕರೆದು ತನ್ನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದರು. ನಂತರ ಉಮೇಶ್ ಅವರಿಗೆ ಮದುವೆಯಾಗಿರುವುದು ಗೊತ್ತಾಯಿತು ಎಂದು ತಿಳಿಸಿದ್ದಾರೆ.
ಉಮೇಶ್ ಅವರು ಹೊಟೇಲ್ ನಲ್ಲಿ ಸಂತ್ರಸ್ತೆ ಹೇಳಿದ ದಿನ ಕೋಣೆ ಬುಕ್ ಮಾಡಿದ್ದರು ಎಂದು ಹೊಟೇಲ್ ಸಿಬ್ಬಂದಿ ತಿಳಿಸಿದ್ದಾರೆ.
(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)