ಕಾಂಗ್ರೆಸ್ ನಿಂದ ಹ್ಯಾರಿಸ್ ಪುತ್ರನ ಉಚ್ಚಾಟನೆ

ಬೆಂಗಳೂರುಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಹಿನ್ನೆಲೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಮಹಮದ್‌ ನಲಪಾಡ್‌ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ತೆಗೆದುಕೊಂಡಿದ್ದು, ಪಕ್ಷದಿಂದ ಉಚ್ಚಾಟನೆ ಮಾಡಿದೆ.

ಶನಿವಾರ ರಾತ್ರಿ ಯುಬಿ ಸಿಟಿಯ ರೆಸ್ಟೊರೆಂಟ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ನಲಪಾಡ್‌ ಮತ್ತು ಆತನ ಹತ್ತಕ್ಕೂ ಹೆಚ್ಚು ಸ್ನೇಹಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಬಗ್ಗೆ ಆರೋಪಿಸಲಾಗಿದೆ.

ಆರೋಪ ಕೇಳಿ ಬಂದ ತಕ್ಷಣ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ನಲಪಾಡ್‌ನ‌ನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ. .

ಪ್ರತಿ ದೂರು : ಏತನ್ಮಧ್ಯೆ, ಹ್ಯಾರಿಸ್‌ ಬೆಂಬಲಿಗ ಅರುಣ್‌ ಬಾಬು ಎನ್ನುವವರು ಪ್ರತಿ ದೂರನ್ನೂ ದಾಖಲಿಸಿದ್ದಾರೆ. ವಿದ್ವತ್‌ ಮದ್ಯಪಾನ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಈ ಹಿಂದೆ ಹ್ಯಾರಿಸ್‌ ಅವರ ಇನ್ನೋರ್ವ ಪುತ್ರ ಉಮರ್‌ ವಿರುದ್ಧ ಪಬ್‌ನಲ್ಲಿ ಗಲಾಟೆ ನಡೆಸಿದ ಪ್ರಕರಣ ದಾಖಲಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ