ವಾಷಿಂಗ್ಟನ್,ಫೆ.17- ಶಾಲೆಯೊಂದರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಮೊಮ್ಮಗನನ್ನು ಆತನ ಅಜ್ಜಿಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ.
ವಾಷಿಂಗ್ಟನ್ ನ ಎಸಿಇಎಸ್ ಪ್ರೌಢಶಾಲೆಯಲ್ಲಿ ವ್ಯಾಸಂಗ 18 ವರ್ಷದ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಲಾಗಿತ್ತು. ಈ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಲು ಆತ ಸಂಚು ರೂಪಿಸಿದ್ದ.
ತನ್ನ ಸಂಚಿನ ಕುರಿತು ನೋಟ್‍ಬುಕ್‍ವೊಂದರಲ್ಲಿ ಬರೆದಿಟ್ಟಿದ್ದ. ಆತನ ಕೋಣೆಯಲ್ಲಿ ಪಿಸ್ತೂಲï ಸಹ ಪತ್ತೆಯಾಗಿತ್ತು. ಆಕಸ್ಮಿಕವಾಗಿ ಅಜ್ಜಿಗೆ ನೋಟ್‍ಬುಕ್ ಸಿಕ್ಕಿದ್ದು, ಕೂಡಲೇ ಆಕೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ತಕ್ಷಣವೇ ಶಾಲೆಗೆ ಧಾವಿಸಿದ ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿ ಆತನ ಬಳಿಯಿದ್ದ ಚಾಕು ಹಾಗೂ ಡ್ರಗ್ಸ್‍ನ್ನು ವಶಪಡಿಸಿಕೊಂಡಿದ್ದಾರೆ.
ಪ್ರೊ ಶಾಲೆಯೊಂದರಲ್ಲಿ ತನ್ನನ್ನು ಹೊರಹಾಕಿದ್ದಾರೆಂಬ ಕಾರಣಕ್ಕೆ ಮಾಜಿ ವಿದ್ಯಾರ್ಥಿಯೊಬ್ಬ ಶಾಲೆಗೆ ನುಗ್ಗಿ 17 ಮಂದಿಯ ಸಾವಿಗೆ ಕಾರಣನಾಗಿದ್ದ ಘಟನೆ ನಡೆದ ದಿನವೇ ಈ ವಿದ್ಯಾರ್ಥಿಯ ಬಂಧನವಾಗಿದೆ.
(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)