ಡೈಸನ್ ತನ್ನ ಇತ್ತೀಚಿನ ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆ

ನವದೆಹಲಿ,ಫೆ.17-ಜಾಗತಿಕ ತಂತ್ರಜ್ಞಾನ ಸಂಸ್ಥೆ ಮತ್ತು ಉನ್ನತ ಪ್ರದರ್ಶನದ ಯಂತ್ರಗಳ ಅಭಿವೃದ್ಧಿ ಕಂಪನಿಯಾದ ಡೈಸನ್ ತನ್ನ ಇತ್ತೀಚಿನ ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಈ ವೇಳೆ ಮಾತನಾಡಿದ ಡೈಸನ್ ಮಂಡಳಿಯ ಸದಸ್ಯರು ಮತ್ತು ಮುಖ್ಯ ಇಂಜಿನಿಯರ್ ಜೇಕ್ ಡೈಸನ್, ಹೊಸದಿಲ್ಲಿಯ ಡಿಎಲ್‍ಎಫ್ ಪ್ರೊಮೆನೇಡ್ ಮಾಲ್‍ನಲ್ಲಿ ದೇಶದ ಮೊಟ್ಟ ಮೊದಲ ಡೈಸನ್ ಡೆಮೊಸ್ಟೋರ್ ಮಳಿಗೆಯನ್ನು ಅಧಿಕೃತವಾಗಿ ಸಂಸ್ಥೆ ತೆರೆದಿದೆ. ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ 1200 ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆ ಮಾಡಿ, ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯ ಮಾರ್ಗದ ಮೂಲಕ ಸಿಂಗಲ್ ಬ್ರಾಂಡ್ ರಿಟೇಲ್ ಮಾರಾಟಕ್ಕೆ ಸಂಸ್ಥೆ ಪರವಾನಗಿಯನ್ನು 2017ರಲ್ಲಿ ಪಡೆದುಕೊಂಡಿದೆ ಎಂದರು.

ಬ್ರಿಟಿಷ್ ಸಂಶೋಧಕ ಮತ್ತು ಉದ್ಯಮಶೀಲರಾದ ಸರ್.ಜೇಮ್ಸ್ ಡೈಸನ್ ಓಮ್ ಅವರಿಂದ ಸ್ಥಾಪಿತವಾದ ಡೈಸನ್ ತನ್ನ ಇತ್ತೀಚಿನ ಸಮಸ್ಯೆ ಪರಿಹರಿಸುವ ತಂತ್ರಜ್ಞಾನವನ್ನು ಭಾರತಕ್ಕೆತಂದಿದೆ ಎಂದ ಅವರು, ಇದರಲ್ಲಿ ಕಾರ್ಡ್ ಫ್ರೀ ವ್ಯಾಕ್ಯೂಮ್ ಕ್ಲೀನರ್‍ಗಳು(ಡೈಸನ್ ವಿ7 ಮತ್ತು ವಿ8 ಶ್ರೇಣಿ), ಕ್ರಾಂತಿಕಾರಿ ಹೇರ್‍ಡ್ರೈಯರ್ (ಡೈಸನ್ ಸೂಪರ್‍ಸಾನಿಕ್) ಮತ್ತು ಹೇರ್ ಗಾಳಿ ಶುದ್ಧೀಕರಿಸುವ ಬುದ್ಧಿವಂತ ಪ್ಯೂರಿಫೈಯರ್‍ಗಳು (ಡೈಸನ್ ಫ್ಯೂರ್‍ಕೂಲ್ ಲಿಂಕ್) ಇವುಗಳಲ್ಲಿ ಸೇರಿವೆ ಎಂದು ವಿವರಿಸಿದರು.
ಡೈಸನ್‍ನ ಇಂಜಿನಿಯರ್‍ಗಳು ವಿಜ್ಞಾನ ಮತ್ತು ತಂತ್ರಜ್ಞಾನಗಳೊಂದಿಗೆ ಯಾವಾಗಲೂ ಆರಂಭಿಸುತ್ತಾರೆ. ನಾವು ಇವುಗಳನ್ನು ಬಳಸಿ ಉತ್ಪನ್ನಗಳನ್ನು ಸುಧಾರಿಸುತ್ತೇವೆ. ಅವುಗಳನ್ನು ಬಳಸಲು ಹೆಚ್ಚು ಉತ್ಸಾಹಕಾರಿ ಮತ್ತು ಆನಂದಕರವಾಗಿಸುತ್ತೇವೆ ಎಂದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ