
ಗೌರಿಬಿದನೂರು, ಫೆ.16- ದ್ವಿಚಕ್ರ ವಾಹನ ಪಾನೀಪುರಿ ಗಾಡಿ ಡಿಕ್ಕಿ ಹೊಡೆದ ಪರಿಣಾಮ ಮೂರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ವಿದುರಾಶ್ವತ್ಥ ಕ್ರಾಸ್ ಬಳಿ ನಡೆದಿದೆ.
ಇಡಗೂರು ಗ್ರಾಮದ ವಾಸಿಗಳಾದ ನಂದೀಶ್ (26), ಶಿವಕುಮಾರ್ (22) ಗಂಭೀರವಾಗಿ ಗಾಯಗೊಂಡಿರುವ ದ್ವಿಚಕ್ರ ವಾಹನ ಸವಾರರು. ವಿದುರ ಕಾಲೋನಿ ನಿವಾಸಿ ಪಾನಿಪುರಿ ಗಾಡಿ ಮಾಲೀಕ ಆನಂದ (46) ಅವರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಮತ್ತು ನಿಮಾನ್ಸ್‍ಗೆ ರವಾನಿಸಲಾಗಿದೆ.
ಸುದ್ದಿ ತಿಳಿದ ತಕ್ಷಣ ಗ್ರಾಮಾಂತರ ಠಾಣೆಯ ಎಸೈ ಅವಿನಾಶ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
(ಪ್ರಾತಿನಿಧ್ಯಕ್ಕಾಗಿ ಮಾತ್ರ ಪೋಸ್ಟ್ ಮಾಡಲಾದ ಫೋಟೋ, ಮೂಲವಲ್ಲ)