ಜಾತಿ, ಆದಾಯ ಹಾಗೂ ವಾಸದ ಪ್ರಮಾಣ ಪತ್ರಗಳನ್ನು ತಕ್ಷಣವೇ ನೀಡುವ ಈ ಕ್ಷಣ ಯೋಜನೆಯನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರು, ಫೆ.16-  ಆನ್‍ಲೈನ್ ಮತ್ತು ಓವರ್ ದ ಕೌಂಟರ್ ಮೂಲಕ ನಗರ ಪ್ರದೇಶದ ಎಲ್ಲ ಭಾಗಗಳಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ.

ಭೂ ಮಾಪನಾ ಇಲಾಖೆಯ ಸಾರ್ವಜನಿಕ ಸೇವೆ ಪಡೆಯಲು ಸಂಯೋಜನೆ, ತಾವು ನಿಂತಿರುವ ಸ್ಥಳದ ಸರ್ವೆ ನಂಬರ್ ಮತ್ತು ನಕಾಶೆ ಪಡೆಯಲು ದಿಶಾಂಕ್, ಪೆÇೀಡಿ, ಡಿಜಿಟಲ್ ನಕಾಶೆ ಪಡೆಯಲು ಸಮೀಕ್ಷೆ, ಆಧಾರ್ ಸಂಖ್ಯೆ ಪಡೆಯಲು ಆಧಾರ್ ಸಂಗ್ರಹಣೆ ಹಾಗೂ ಯಾವುದೇ ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು ಮೌಲ್ಯ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ.

ಭೂ ಮಾಲೀಕತ್ವದ ಸಮಸ್ಯೆ ಬಗೆಹರಿಸಲು ಮೂರು ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಲ್ಯಾಂಡ್ ಟಿಲ್ಟಿಂಗ್ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಸರ್ಕಾರಿ ಜಮೀನಿನಲ್ಲಿ ನೆಲೆಗೊಂಡಿರುವ 1568 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಎಲ್ಲ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ತೀರ್ಮಾನಿಸಲಾಗಿದೆ.

2018-19ನೆ ಸಾಲಿನಲ್ಲಿ 2500 ಗ್ರಾಮಗಳನ್ನು ಪೆÇೀಡಿಮುಕ್ತಗೊಳಿಸಲಾಗುವುದು. ಸಾಮಾಜಿಕ ಭದ್ರತಾ ಮಾಸಿಕ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹಾಗೂ ಮೈತ್ರಿ ಯೋಜನೆಯಡಿ ನೀಡಲಾಗುತ್ತಿರುವ ಪಿಂಚಣಿ ಮೊತ್ತವನ್ನು 500 ರೂ.ನಿಂದ 600 ರೂ.ಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಕಾವೇರಿ ತಂತ್ರಾಂಶವನ್ನು ಬಿಬಿಎಂಪಿ ಜಿಐಎಸ್ ಡಾಟಾ ಬೇಸ್‍ನೊಂದಿಗೆ ಸಂಯೋಜನೆಗೊಳಿಸಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಅಪಮೌಲ್ಯ ಗೊಳಿಸುವುದನ್ನು ತಡೆಗಟ್ಟುವ ಉದ್ದೇಶಕ್ಕಾಗಿ 3 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.
ಸಾರ್ವಜನಿಕರಿಗೆ ಹವಮಾನ ಮಾಹಿತಿ ಮುನ್ಸೂಚನೆ ಹಾಗೂ ಸಿಡಿಲು ಮುನ್ನೆಚ್ಚರಿಕೆ ನೀಡುವ ಮೊಬೈಲ್ ಆ್ಯಪ್‍ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

4110 ಅರ್ಹ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗುತ್ತಿದ್ದ ತಸ್ತಿಕ್ ಮೊತ್ತವನ್ನು 20 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.

ತಿರುಪತಿಗೆ ತೆರಳುವ ರಾಜ್ಯದ ಭಕ್ತರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ 20 ಕೋಟಿ ರೂ. ವೆಚ್ಚದಲ್ಲಿ ತಿರುಮಲ ಬೆಟ್ಟದಲ್ಲಿ ಸುಸಜ್ಜಿತ ಅತಿಥಿಗೃಹ ನಿರ್ಮಿಸಲಾಗುತ್ತಿದೆ.

ಒಟ್ಟಾರೆ ಕಂದಾಯ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 6642 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ