ಲಿಟ್ಲ್ ಬಡ್ಡಿ ಕಿಂಡರ್‍ಗಾರ್ಟನ್‍ನಿಂದ ಪ್ರಿಸ್ಕೂಲ್ಗೆ ಸಮಗ್ರವಾದ ಏಕೀಕೃತ ಫ್ರಾಂಚೈಸಿ ಮಾದರಿ ಪ್ರಾರಂಭ

ಬೆಂಗಳೂರು: ದೇಶದ ಬ್ರಾಂಡೆಡ್ ಪ್ರಿಸ್ಕೂಲ್ ಮಾರುಕಟ್ಟೆಗೆ ಹೊಸ ಪ್ರ ವೇಶ ಲಿಟ್ಲ್ ಬಡ್ಡಿ ಕಿಂಡರ್‍ಗಾರ್ಟನ್ `ಸಮಗ್ರವಾದ ಏಕೀಕೃತ ಫ್ರಾಂಚೈಸಿ ಮಾದರಿ’ಯನ್ನು ಪ್ರಾರಂಭಿಸಿದೆ. ಬ್ರಾಂಡ್ಪ್ರಾರಂಭೋತ್ಸವದಲ್ಲಿ ಕಂಪನಿಯ ಪ್ರವರ್ತಕರು ಕಂಪನಿಯ ಪ್ರಮುಖ ಕೊಡುಗೆಗ ಳು ಮತ್ತು ಪ್ರಮುಖ
ವಿಶೇಷತೆ ಗಳ ಮಾತನಾಡಿದರು.

ಈ ಪರಿಕಲ್ಪನೆಯನ್ನು ಉತ್ತೇಜಿಸುವ ಮತ್ತು ಲಿಟ್ಲ್ ಬಡ್ಡಿ ಕಿಂಡರ್‍ಗಾರ್ಟನ್‍ನಲ್ಲಿ ಕಲಿಕೆಯ ವಿಧಾನ ಕುರಿತು ಲಿಟ್ಲ್ ಬಡ್ಡಿ ಕಿಂಡರ್‍ಗಾರ್ಟನ್‍ನ ಪೋಷಕಿ ಮತ್ತು ಶಿಕ್ಷಣತಜ್ಞೆ ಶ್ರೀಮತಿ ಮಂಜುಳಾ ರಾಮನ್, `5 ವರ್ಷಗಳವರೆಗಿನ ಮಕ್ಕಳಿಗೆ ಕಲಿಯುವ ಮತ್ತು ಹೊಸದನ್ನು ಅಳವಡಿಸಿಕೊಳ್ಳುವ ಅಪಾರ
ಸಾಮಥ್ರ್ಯವಿರುತ್ತದೆ, ಕಲಿಕೆಯ ವಾತಾವರಣವು ಆವಿಷ್ಕಾರಕ, ನಿರ್ಬಂಧ ರಹಿತ ಮತ್ತು ಬಹು ಆಯಾಮಗಳದ್ದಾಗಿರಬೇಕು. ಲಿಟ್ಲ್ ಬಡ್ಡಿ ಕಿಂಡರ್‍ಗಾರ್ಟನ್ ಮಗುವಿನ ಕುತೂಹಲ ಮತ್ತು ಆಸಕ್ತಿಯನ್ನು ಅನುಭವಪೂರ್ವಕ ಮತ್ತು ವಿಚಾರಣೆ ಆಧರಿತ ಕಲಿಕೆಯಾಗಿಸುವ ವಿಶೇಷ ಪಠ್ಯಕ್ರಮ ಮತ್ತು ಬೋಧನೆಯ ಮಾದರಿ ಹೊಂದಿರುತ್ತದೆ. ಇದರಿಂದ ಮಕ್ಕಳಿಗೆ ಹೆಚ್ಚು ಸಾಮಥ್ರ್ಯದೊಂದಿಗೆ ಬೆಳೆಯಲು, ಸ್ವತಂತ್ರ ಆಲೋಚನೆ ಬೆಳೆಸಿಕೊಳ್ಳಲು ಮತ್ತು ಅವರಿಗೆ ಸ್ವಂತ ಜವಾಬ್ದಾರಿ ತೆಗೆದುಕೊಳ್ಳಲು ನೆರವಾಗುತ್ತದೆ’ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ