ಇಂದು ವಿಶ್ವದಾದ್ಯಂತ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿದರೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಉತ್ತರ ವಿಭಾಗದಿಂದ ನಾಗರಬಾವಿಯ ಕೆ.ಎಲ್.ಇ ಕಾನೂನು ಮಹಾವಿದ್ಯಾಲಯದಲ್ಲಿ ಎಬಿವಿಪಿ ಹಾಗೂ ಕೆ.ಎಲ್.ಇ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ MY NATION – MY VALENTINE ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಂಜೀವ ಕುಬಕಡ್ಡಿ ಸಿಂಡಿಕೇಟ್ ಸದಸ್ಯರು, ವಿಟಿಯು ಬೆಳಗಾವಿ. ಇವರು ಮಾತನಾಡಿದರು. ಜ್ಞಾನಭಾರತಿ ನಗರ ವಿದ್ಯಾರ್ಥಿನಿ ಪ್ರಮುಖ ಕನ್ನಿಕ ಎಬಿವಿಪಿಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು, ಕಾಲೇಜು ಕಾರ್ಯದರ್ಶಿ ನಿತಾಶಾ ದಾಸ್ ಸ್ವಾಗತಿಸಿದರು, ಅದೇ ಕಾಲೇಜಿನ ಅದ್ಯಾಪಕರಾದ ಸುಬ್ರಮಣ್ಯ ಸರ್ ವಂದಿಸಿದರು.