ಹೊಸದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ(ಪಿಎನ್ಬಿ) 11,300 ಕೋಟಿ ರೂ. ಅಕ್ರಮ ಹಣ ವ್ಯವಹಾರ ಪತ್ತೆಯಾಗಿದೆ. ಬ್ಯಾಂಕ್ನ ಮುಂಬಯಿ ಶಾಖೆಯಲ್ಲಿ ಪ್ರಕರಣ ನಡೆದಿದೆ. ಈ ಬೆಳವಣಿಗೆ ಪರಿಣಾಮ ಬ್ಯಾಂಕ್ನ ಷೇರುಗಳು ಶೇ.9.8ರಷ್ಟು ಕುಸಿದಿದ್ದು, ಹೂಡಿಕೆದಾರರು 3,844 ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ಅಕ್ರಮ ವರ್ಗಾವಣೆ ಮೊತ್ತವು ಒಟ್ಟಾರೆ ಮಾರುಕಟ್ಟೆ ಬಂಡವಾಳದ ಮೂರನೇ ಒಂದು ಭಾಗದಷ್ಟಿದೆ. ಬ್ಯಾಂಕ್ನ ಮಾರುಕಟ್ಟೆ ಬಂಡವಾಳ 36,000 ಕೋಟಿ ರೂ. ಇದೆ. ವಂಚನೆಯ ಮೊತ್ತವು ಬ್ಯಾಂಕ್ನ ನಿವ್ವಳ ಲಾಭಕ್ಕಿಂತ 8 ಪಟ್ಟು ದೊಡ್ಡದು. 2017ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ 1,324 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು.
”ಮೋಸದ ಮತ್ತು ಅನಧಿಕೃತ ವಹಿವಾಟುಗಳು ಮುಂಬಯಿ ಶಾಖೆಯಲ್ಲಿ ಕಂಡು ಬಂದಿವೆ. ಪ್ರಕರಣವನ್ನು ಈಗಾಗಲೇ ಸರಕಾರದ ತನಿಖಾ ಸಂಸ್ಥೆಗಳಿಗೆ ಒಪ್ಪಿಸಲಾಗಿದೆ. ಕಾನೂನಿನ ಪ್ರಕಾರ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗುತ್ತವೆ. ಪಾರದರ್ಶಕ ವ್ಯವಸ್ಥೆ ಕಾಯ್ದುಕೊಳ್ಳಲು ಬ್ಯಾಂಕ್ ಬದ್ಧವಾಗಿದೆ,” ಎಂದು ಪ್ರಕಟಣೆಯಲ್ಲಿ ಪಿಎನ್ಬಿ ಹೇಳಿದೆ.