ಬೆಂಗಳೂರು, ಫೆ.13- ಪರಮಾರ್ಥ ಕೇಂದ್ರದ ವತಿಯಿಂದ ಫೆ.15 ರಿಂದ 18ರ ವರೆಗೆ ಮೂರು ದಿನಗಳ ಗಾಢವಾದ ಓಶೋ ವಸತಿ ಧ್ಯಾನ ಕಾರ್ಯಾಗಾರವನ್ನು ವೈಟ್ಫೀಲ್ಡ್ನ ಎಕ್ಯುಮೆನಿಕಲ್ ಕ್ರಿಶ್ಚಿಯನ್ ಸೆಂಟರ್ನಲ್ಲಿ ಏರ್ಪಡಿಸಲಾಗಿದೆ.
ಪ್ರಸ್ತುತ ಓಶೋ ಗಾಢವಾದ ಧ್ಯಾನ ಚಿಕಿತ್ಸಾ ಕಾರ್ಯಾಗಾರವು ಪ್ರತಿಯೊಬ್ಬರಿಗೂ ಅವಶ್ಯಕವಾಗಿದ್ದು, ವಿಶೇಷವಾಗಿ ಕೆಲಸದಲ್ಲಿ ಅನುಭವಿಸುವ ಒತ್ತಡ, ದಿನನಿತ್ಯ ಎದುರಿಸುವ ಭಾವನಾತ್ಮಕ ಅವಗಣನೆ ಮತ್ತು ಮಾನಸಿಕ ಒತ್ತಡ, ಕೋಪ, ಖಿನ್ನತೆ ಹಾಗೂ ಮನಸ್ಸು ಮತ್ತು ದೇಹಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳಿಗೂ ಪರಿಹಾರ ದೊರೆಯುವ ಕಾರ್ಯಾಗಾರವಾಗಿದೆ.
ಈ ಕಾರ್ಯಾಗಾರದಲ್ಲಿ ಡೈನಮಿಕ್, ಚಕ್ರ ಉಸಿರಾಟ, ಚಕ್ರ ಶಬ್ದಗಳು, ತಿರುಗಣೆ, ಗೌರಿಶಂಕರ, ನಟರಾಜ, ಮಂಡಲ, ನಾದಬ್ರಹ್ಮ ಮತ್ತು ದೇವಯಾನಿ ಸೇರಿದಂತೆ ಇನ್ನೂ ಅನೇಕ ರೀತಿಯ ಧ್ಯಾನಗಳನ್ನು ಈ ಮೂರು ದಿನಗಳಲ್ಲಿ ನಡೆಸಲಾಗುವುದು.
ಇದು ನಮ್ಮ 36ನೆ ವರ್ಷದ ಓಶೋ ವಸತಿ ಧ್ಯಾನ ಕಾರ್ಯಾಗಾರ ಶಿಬಿರವಾಗಿರುತ್ತದೆ. ಓಶೋ ಪರಮಾರ್ಥ ಧ್ಯಾನಕೇಂದ್ರವು ಬೆಂಗಳೂರಿನ ಕುಮಾರ ಪಾರ್ಕ್ ಪ್ರದೇಶದಲ್ಲಿದ್ದು, ಎಂಟಿ ಪಂಜಾಬಿ ಚಾರಿಟಬಲ್ ಟ್ರಸ್ಟ್, ಬೆಂಗಳೂರು ಈ ಪ್ರಭಾವಳಿ ಅಡಿ ಕಳೆದ 40 ವರ್ಷಗಳಿಂದ ಶಿಬಿರ ನಡೆಸುತ್ತಿದೆ.
ಪ್ರಸ್ತುತ ಕೇಂದ್ರವು ಪ್ರತಿಯೊಬ್ಬರಿಗೂ ಮುಕ್ತವಾಗಿದ್ದು, ಉಚಿತವಾಗಿರುತ್ತದೆ. ಜನರು ಆಗಮಿಸಿ ಮತ್ತು ಧ್ಯಾನ ಮತ್ತು ಸಂಗೀತ ಚಿಕಿತ್ಸೆಯಿಂದ ಲಾಭ ಪಡೆಯಬಹುದು.
ಫೆ.17ರಂದು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಎಕ್ಯುಮೆನಿಕಲ್ ಕ್ರಿಶ್ಚಿಯನ್ ಸೆಂಟರ್ನಲ್ಲಿ ಪ್ರಖ್ಯಾತ ಸೂಫಿ ಕಲಾವಿದರಾದ ಅಶ್ರಫ್ ಹೈಡ್ರೋಜ್ರವರ ನೇತೃತ್ವದಲ್ಲಿ ತಿರುಗಣೆ ಕಲಾವಿದರ ಜತೆ ನಡೆಸಿಕೊಡುವ ಸೂಫಿ ಮ್ಯೂಜಿಕ್ ಸುಂದರ ಸಂಜೆ ಕಾರ್ಯಕ್ರಮ ನಡೆಯಲಿದೆ.