ಜೆಎನ್‍ಎಂಸಿ ಆವರಣದ ಶಿವಾಲಯದಲ್ಲಿ ಸಹಸ್ರಾರು ಭಕ್ತರಿಂದ ಶಿವಲಿಂಗದರ್ಶನ

ಬೆಳಗವಿ- ನಗರದ ಜೆಎನ್‍ಎಂಸಿ ಆವರಣದಲ್ಲಿರುವ ಶಿವಾಲಯದಲ್ಲಿ ಪ್ರತಿಷ್ಠಾಪಿತವಾಗಿರುವ ಶಿವಲಿಂಗವು ಗಂಗಾನದಿಯಲ್ಲಿ ದೊರೆತಿರುವುದಾಗಿದ್ದು ಹಲವು ಬಣ್ಣಗಳಿಂದ ಕೊಡಿದ್ದು ಶಿವನ ಜಟೆ, ಚಂದ್ರಾಕೃತಿಯಂತಹ ಅನೇಕ ಚಿಹ್ನೆಗಳು ಅದರಲ್ಲಿ ಮೊಡಿದ್ದು ತನ್ನದೆ ಆದ ಇತಿಹಾಸ ಹಾಗು ಮಹಿಮೆಯನ್ನ ಹೊಂದಿದೆ. ಶಿವರಾತ್ರಿಯ ದಿನದಂದು ಈ ಶಿವಲಿಂಗದ ದರ್ಶನವಾದರೆ ಮೊಕ್ಷಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇಂದು ಬೆಳಗಿನಜಾವ ರುದ್ರಾಭಿಷೇಕ ನೆರವೇರಿಸಿ ವಿಶೇಷ ಪೋಜೆ ಹಾಗು ಅಲಂಕಾರವನ್ನ ಮಾಡಲಾಗಿತ್ತು ನಗರದ ಸಹಸ್ರಾರು ಭಕ್ತರು ಹಾಗು ಕೆಎಲ್‍ಇ ಸಂಸ್ಥೆಯ, ವಿಶ್ವವಿದ್ಯಾಲಯದ ಎಲ್ಲ ಹಿರಿ-ಕಿರಿ ಸಿಬ್ಬಂದಿಗಳು ವಿದ್ಯಾರ್ಥಿಗಳು ದೇವರ ದರ್ಶನ ಪಡೆದರು. ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಸಂಜೆ 6 ಗಂಟೆಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಹಾರುದ್ರಾಭಿಷೇಕ ಮಾಡಲಾಯಿತು, ಬೆಳಗಿನಿಂದ ಉಪವಾಸವಿದ್ದು ಉಪವಾಸವನ್ನ ಅಂತ್ಯಗೊಳಿಸಿದ ಭಕ್ತರಿಗೆ ಫಳಾರ, ಲಗು ಉಪಹಾರ ಮತ್ತು ತೀರ್ಥಪ್ರಸಾದನ್ನ ವಿತರಿಸಲಾಯಿತು, ಹಾಗು ಗಂಗಾನದಿಯಿಂದ ವಿಶೇಷವಾಗಿ ತರಲಾಗಿದ್ದ ಗಂಗಾಜಲವನ್ನ ಮತ್ತು ರುದ್ರಾಕ್ಷಿಯನ್ನ ದೇವರ ದರ್ಶನ ಪಡೆದ ಭಕ್ತರಿಗೆ ವಿತರಿಸಲಾಯಿತು. ದೇವಸ್ಥಾನವನ್ನಬಣ್ಣದ ದೀಪಗಳಿಂದ ವಿಶೇಷವಾಗಿ ಅಲಕಂರಿಸಲಾಗಿತ್ತು. 12 ಜ್ಯೋರ್ತಿಲಿಂಗಗಳ ಪರಿಚಯದ ಸಾಕ್ಷ್ಯಾಚಿತ್ರವನ್ನ ಭಕ್ತರು ವೀಕ್ಷೀಸಲು ಪ್ರದರ್ಶನವನ್ನ ಎರ್ಪಡಿಸಲಾಗಿತ್ತು. ಶಂಕರಯ್ಯಶಾಸ್ತ್ರಿ, ಈರಯ್ಯಶಾಸ್ತ್ರಿ ಹಾಗು ತಂಡದವರು ಪೋಜಾಕಾರ್ಯವನ್ನ ನೇರವೇರಿಸಿದರು. ಕೆಎಲ್‍ಇ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಎಸ್‍ಜಿ ಪಾಟೀಲ ವ್ಯವಸ್ಥೆಯ ನೇತೃತ್ವವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ