ತಾಕತ್ತಿದ್ದರೆ ನಮ್ಮನ್ನು ಹಿಡೀರಿ ಎಂದು ಪೊಲೀಸರಿಗೆ ಓಪನ್ ಚಾಲೆಂಜ್ ಪುಂಡರ ಗುಂಪೊಂದು ಬೈಕ್ ವ್ಹೀಲಿಂಗ್ ಮಾಡುತ್ತಾ

ತುಮಕೂರು, ಫೆ.13- ತಾಕತ್ತಿದ್ದರೆ ನಮ್ಮನ್ನು ಹಿಡೀರಿ ಎಂದು ಪೊಲೀಸರಿಗೆ ಓಪನ್ ಚಾಲೆಂಜ್ ಹಾಕುತ್ತಾ ಪುಂಡರ ಗುಂಪೊಂದು ಕಿಲೋಮೀಟರ್ ಗಟ್ಟಲೆ ಬೈಕ್ ವ್ಹೀಲಿಂಗ್ ಮಾಡುತ್ತಾ , ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಘಟನೆಗಳು ನಗರದಲ್ಲಿ ಮಿತಿ ಮೀರಿದೆ.

ಪ್ರತಿ ದಿನ ಕೆಲ ಯುವಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್‍ಗಟ್ಟಲೆ ಹಣವನ್ನು ಪಂದ್ಯವಾಗಿ ಕಟ್ಟಿಕೊಂಡು ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಹಾಗೂ ಇತರ ವಾಹನ ಸವಾರರಿಗೆ ಭಾರೀ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.
ಇವರನ್ನು ಪ್ರಶ್ನೆ ಮಾಡಲು ಹೋಗುವ ಪೆÇಲೀಸರಿಗೆ ಹಾಗೂ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿರುವ ಘಟನೆಗಳು ಪ್ರತಿ ದಿನ ನಡೆಯುತ್ತಲೇ ಇದೆ. ಯುವಕರ ಬೈಕ್ ಕಯ್ಯಾಲಿಗೆ ಮಿತಿಯೇ ಇಲ್ಲದಂತಾಗಿದ್ದು , ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಯುವಕರ ಬೈಕ್ ವ್ಹೀಲಿಂಗ್‍ಗೆ ಈಗಾಗಲೇ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಾಗಾಗಿ ಸ್ಥಳೀಯರು ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆÇಲೀಸ್ ಅವರು ಇಲ್ಲದ ಸಮಯದಲ್ಲಿ ಸುಮಾರು ಹತ್ತು ಹದಿನೈದು ಮಂದಿ ಯುವಕರ ಗುಂಪು ಹಣವನ್ನು ಪಂದ್ಯವಾಗಿ ಕಟ್ಟಿಕೊಂಡು ಕಿಲೋ ಮೀಟರ್ ಗಟ್ಟಲೆ ವ್ಹೀಲಿಂಗ್ ಮಾಡುವುದಲ್ಲದೆ ಟ್ರಾಫಿಕ್ ಜಾಮ್ ಕೂಡ ಮಾಡುತ್ತಾರೆ ಎಂದು ವಾಹನ ಸವಾರರು ಹಾಗೂ ಸಾರ್ವಜನಿಕರು ದೂರಿದ್ದಾರೆ.

ಪೆÇಲೀಸರು ಇವರನ್ನು ನಿಯಂತ್ರಿಸಲು ಎಷ್ಟೇ ಪ್ರಯತ್ನ ಪಟ್ಟರು ಅವರಿಗೆ ಚಳ್ಳೆ ಹಣ್ಣು ತಿನ್ನಿಸಿ ವ್ಹೀಲಿಂಗ್ ಮಾಡುತ್ತಾರೆ.
ಈ ಸಂಬಂಧ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಅವರು ಜಿಲ್ಲೆಯ ಆಯಾಯ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುವ ಯುವಕರು ಕಂಡು ಬಂದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಇಲ್ಲವಾದರೆ ಮುಂದೆ ಆಗುವ ಅನಾಹುತಗಳಿಗೆ ನೀವೇ ನೇರ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

(ಫೋಟೋವನ್ನು ಪ್ರತಿನಿಧಿಸುವುದಕ್ಕಾಗಿ ಮಾತ್ರ ಇರಿಸಲಾಗುತ್ತದೆ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ