ಬೆಂಗಳೂರು, ಫೆ.12- ಕಳ್ಳರು ಮನೆಯ ಬೀಗ ಒಡೆದು 140 ಗ್ರಾಂ ಚಿನ್ನ ಮತ್ತು ನಗದು ದೋಚಿರುವ ಘಟನೆ ವೈಯಾಲಿಕಾವಲ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಂಗನಾಥಪುರ 17ನೇ ಕ್ರಾಸ್ ನಿವಾಸಿ ಜಯರಾಂ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.
ಮನೆಗೆ ಬೀಗ ಹಾಕಿ ಶನಿವಾರ ಹೊರಗೆ ಹೋಗಿದ್ದ ಜಯರಾಂ ಭಾನುವಾರ ಸಂಜೆ ವಾಪಸ್ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಕಳ್ಳರು ಬೀಗ ಮುರಿದು ಒಳನುಗ್ಗಿ 140 ಗ್ರಾಂ ಮತ್ತು 10 ಸಾವಿರ ರೂ. ನಗದನ್ನು ದೋಚಿದ್ದಾರೆ.
ಈ ಸಂಬಂಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೋಟೋ ಕ್ರೆಡಿಟ್: tribunenews.com(ಪ್ರಾತಿನಿಧ್ಯಕ್ಕಾಗಿ)