ಸಂಜ್ವಾನ್:ಫೆ-11: ಜಮ್ಮು-ಕಾಶ್ಮೀರದ ಹೊರವಲಯದ ಸಂಜ್ವಾನ್‌ನಲ್ಲಿರುವ ಸೇನಾ ವಸತಿ ನಿಲಯದ ಮೇಲೆ ಜೈಶ್ ಎ ಮೊಹಮ್ಮದ್ ಉಗ್ರರು ನಡೆಸಿದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತುಂಬು ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಬೆನ್ನಿನ ಕೆಳ ಭಾಗಕ್ಕೆ ಗುಂಡು ಹೊಕ್ಕಿದರೂ ವಪಾಡ ಸದೃಶವಾಗಿ ಪಾರಾಗಿದ್ದ 35 ತಿಂಗಳ ತುಂಬು ಗರ್ಭಿಣಿಯನ್ನು ದಾಳಿ ನಡೆದ ಕೂಡಲೆ ಸೇನಾ ಪಡೆಗಳು ಹೆಲಿಕ್ಯಾಪ್ಟರ್ ಬಳಸಿ ಸೇನಾ ಆಸ್ಪತ್ರೆಗೆ ದಾಖಲಿಸಿದ್ದರು. ಶಸ್ತ್ರ ಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯಲಾಗಿದ್ದು, ಹೆಣ್ಣು ಮಗು 2.5 ಕೆ.ಜಿ ತೂಕವಿದ್ದು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ. ತಾಯಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕ್ಯಾಂಪ್‌ನಲ್ಲಿ ಇನ್ನೂ ಕೆಲ ಉಗ್ರರು ಅಡಗಿರುವ ಸಾಧ್ಯತೆ ಹಿನ್ನಲೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ.
ಇನ್ನು ಉಗ್ರರ ದಾಳಿಯಲ್ಲಿ 5 ಯೋಧರು ಹುತಾತ್ಮರಾಗಿದ್ದು, ಇತರ 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಸೇನಾ ಮೇಜರ್ ಹಾಗೂ ಸೇನಾ ಸಿಬ್ಬಂದಿ ಪುತ್ರಿಯೂ ಸೇರಿದ್ದಾರೆ. ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಫೋಟೋ ಕ್ರೆಡಿಟ್: Twitter @ikaveri