![pm modi-grand colors of the state palestine](http://kannada.vartamitra.com/wp-content/uploads/2018/02/pm-modi-grand-colors-of-the-state-palestine.jpg)
ರಮಲ್ಲಾ:ಪೆ-11: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ಯಾಲೆಸ್ಟೀನ್‌ನ ಅತ್ಯುನ್ನತ ಗೌರವವಾದ ‘ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ಟೀನ್’ ನೀಡಿ ಗೌರವಿಸಲಾಯಿತು.
ಪಶ್ಚಿಮ ಏಷ್ಯಾದ ಮೂರು ರಾಷ್ಟ್ರಗಳ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ಯಾಲೆಸ್ಟೀನ್‌ನ ರಮಲ್ಲಾಗೆ ಭೇಟಿ ನೀಡಿದ್ದಾರೆ.
ಭಾರತ-ಪ್ಯಾಲೆಸ್ಟೀನ್‌ನ ನಡುವಿನ ಸಂಬಂಧಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಪ್ರಮುಖ ಕೊಡುಗೆಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಇಲ್ಲಿಗೆ ಬಂದಿಳಿದ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಪ್ಯಾಲೆಸ್ಟೀನ್‌ನ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಸಮಾರಂಭದಲ್ಲಿ ಈ ಗೌರವದ ಸ್ಮರಣಿಕೆ ನೀಡಿ ಅಭಿನಂದಿಸಿದರು.