ಅಬು ದಾಬಿ:ಫೆ-11: ವಿವಿಧ ಕ್ಷೇತ್ರಗಳ 40 ದಶಲಕ್ಷ ಡಾಲರ್ ಮೊತ್ತದ 6 ಒಡಂಬಡಿಕೆಗಳಿಗೆ ಭಾರತ ಮತ್ತು ಪ್ಯಾಲೆಸ್ತೀನ್ ಸಹಿ ಹಾಕಿವೆ. ಪ್ಯಾಲೆಸ್ಟೀನ್ ನಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ ಮತ್ತು ಶೈಕ್ಷಣಿಕ ವಲಯದಲ್ಲಿ ಹಣಕಾಸು ನೆರವು ಸೇರಿದಂತೆ ಹಲವು ಪ್ರಮುಖ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ.
40 ದಶಲಕ್ಷ ಮೊತ್ತದ 6 ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಗೆ 192 ಕೋಟಿ ವಿನಿಯೋಗವಾಗಲಿದೆ. ಪ್ರಮುಖವಾಗಿ 32.1 ಕೋಟಿ ವೆಚ್ಚದ ಮೂರು ಶೈಕ್ಷಣಿಕ ಒಪ್ಪಂದಗಳಿಗೆ ಸಹಿಹಾಕಲಾಗಿದೆ. ಒಟ್ಟು ಭಾರತ ಮತ್ತು ಪ್ಯಾಲೆಸ್ತೀನ್ ಮಧ್ಯೆ 40 ದಶಲಕ್ಷ ಡಾಲರ್ ಮೊತ್ತದ 6 ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಪ್ಯಾಲೆ ಸ್ತೀನ್ ಅಧ್ಯಕ್ಷ ಮಹಮೊದ್ ಅಬ್ಬಾಸ್ ಮತ್ತು ಅವರ ತಂಡ ಸ್ವಾಗತಿಸಿದೆ ಎಂದು ಅಬುದಾಬಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.
ಭಾರತ ಕೈಗೊಳ್ಳುತ್ತಿರುವ ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಯೋಜನೆಗಳಿಗೆ ಪ್ಯಾಲೆಸ್ತೀನ್ ಅಧ್ಯಕ್ಷರು ಭಾರತವನ್ನು ಅಭಿನಂದಿಸಿದರು. ಭಾರತ ಪ್ಯಾಲೆಸ್ತೀನ್ ನಲ್ಲಿ 100 ಬೆಡ್ ಗಳ ಅತ್ಯಾಧುನಿಕ ವಿಶೇಷ ಆಸ್ಪತ್ರೆಯನ್ನು ನಿರ್ಮಿಸಲಿದೆ. ಅಲ್ಲದೆ ಭಾರತ, ಪ್ಯಾಲೆಸ್ತೀನ್ ನಲ್ಲಿ ಮಹಿಳಾ ಸಶಕ್ತೀಕರಣ ಕೇಂದ್ರವನ್ನು ನಿರ್ಮಿಸಲಿದ್ದು, ಅಲ್ಲಿ ಪ್ಯಾಲೆಸ್ತೀನ್ ನ ವಿವಿಧ ಭಾಗಗಳ ಮಹಿಳೆಯರು ಬಂದು ಕೌಶಲ್ಯಗಳನ್ನು ಕಲಿಯಬಹುದು ಎಂದು ವಿಜಯ್ ಗೋಖಲೆ ತಿಳಿಸಿದರು.
ಪ್ಯಾಲೆಸ್ತೀನ್ ನಲ್ಲಿ ಶಾಲೆಗಳ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದು ರಾಷ್ಟ್ರೀಯ ಮುದ್ರಣ ಮಾಧ್ಯಮಕ್ಕೆ ಯಂತ್ರಗಳ ಪೂರೈಕೆಯನ್ನು ಕೂಡ ಭಾರತ ಮಾಡುತ್ತದೆ ಎಂದು ಗೋಖಲೆ ತಿಳಿಸಿದರು.