ಮನೆ, ಕಚೇರಿಯಲ್ಲಿ ಮಹತ್ವದ ದಾಖಲೆಗಳ ವಶ ಇಡಿ ಹಿಡಿತಕ್ಕೆ ಶಾಸಕ: ಜಮೀರ್, ರೋಷನ್

ಬೆಂಗಳೂರು: ಅಕ್ರಮ ಹಣ ವರ್ಗಾವಣೆ, ಐಎಂಎ ಪ್ರಕರಣಕ್ಕೆ ಸಂಬಂಸಿ ಜಾರಿ ನಿರ್ದೇಶನಾಲಯ (ಇಡಿ) ಶಾಸಕ ಜಮೀರ್ ಅಹಮದ್ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಮನೆ, ಕಚೇರಿ ಸೇರಿ ಹಲವು ಕಡೆ ದಾಳಿ ನಡೆಸಿದೆ. ಈ ವೇಳೆ ಹಲವು ದಾಖಲೆ ಸೇರಿದಂತೆ ಬೇಗ್ ಆಪ್ತ ಎಸಾನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಗುರುವಾರ ಬೆಳಗ್ಗೆ ವಸಂತನಗರದ ಜಮೀರ್ ಹಳೇ ನಿವಾಸ, ಬಂಬೂ ಬಜಾರ್‍ನ ನಿವಾಸ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಯುಬಿ ಸಿಟಿಯಲ್ಲಿನ ಫ್ಲ್ಯಾಟ್, ಸದಾಶಿವನಗರದ ಜಮೀರ್ ಆಪ್ತನ ನಿವಾಸ, ಆಪ್ತ ಸಹಾಯಕನ ಮನೆ ಹಾಗೂ ಕೋಲ್ಸ್ ಪಾರ್ಕ್‍ನಲ್ಲಿರುವ ರೋಷನ್ ಬೇಗ್ ಮನೆ ಮೇಲೂ ಇಡಿ ದಾಳಿ ನಡೆದಿದೆ. ಇಬ್ಬರ ಮನೆ, ಕಚೇರಿಯಲ್ಲಿ ಹಲವು ಮಹತ್ವದ ದಾಖಲೆಗಳನ್ನು ತನಿಖಾಕಾರಿ ವಶಕ್ಕೆ ಪಡೆದಿದ್ದಾರೆ.

ಐಎಂಎ ಅವ್ಯವಹಾರ ಪ್ರಕರಣದಲ್ಲಿ ಪ್ರಧಾನ ವಂಚಕ ಮನ್ಸೂರ್, ಶಾಸಕ ಜಮೀರ್ ಮತ್ತು ರೋಷನ್ ಬೇಗ್ ಅವರುಗಳ ಹೆಸರುಗಳನ್ನು ಪ್ರಸ್ತಾಪಿಸಿದ್ದ. ಹಾಗಾಗಿ ಇವರಿಬ್ಬರ ಮನೆಗಳ ಮೇಲೆ ಇಡಿ ದಾಳಿ ನಡೆದಿದೆ. ಶಾಸಕ ಜಮೀರ್ ಅವರ ಮಗಳ ಮದುವೆಗೆ ಹಣ, ಚಿನ್ನ ನೀಡಿದ್ದರ ಬಗ್ಗೆ ಮನ್ಸೂರ್ ಇಡಿ ಅಕಾರಿಗಳ ಎದುರು ಬಾಯ್ಬಿಟ್ಟಿದ್ದ. ಇದೇ ಕಾರಣಕ್ಕೆ ಜಮೀರ್ ಮನೆ ಮೇಲೆ ಇಡಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಬೇಗ್ ಆಪ್ತ ಇಡಿ ವಶಕ್ಕೆ:
ರೋಷನ್ ಬೇಗ್ ಮನೆಗೆ 10ಕ್ಕೂ ಹೆಚ್ಚು ಅಕಾರಿಗಳು ಸಿಆರ್‍ಪಿಎಫ್ ಪೊಲೀಸ್ ಭದ್ರತೆಯೊಂದಿಗೆ ದಾಳಿ ನಡೆಸಲಾಯಿತು. ಬೇಗ್ ಮನೆಯ ಲಾಕರ್‍ನಲ್ಲಿದ್ದ ಹಲವು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಬಳಿಕ ರೋಷನ್ ಬೇಗ್ ಆಪ್ತ ಎಸಾನ್‍ನನ್ನು ವಶಕ್ಕೆ ಪಡೆಯಲಾಗಿದೆ.

ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಬಿಐನಿಂದ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ರೋಷನ್ ಬೇಗ್ ಮತ್ತು ಜಮೀರ್ ಅಹಮದ್ ಖಾನ್ ಅವರ ಆಸ್ತಿ, ಅಕ್ರಮ ಹಣ ವರ್ಗಾವಣೆ ಬಗ್ಗೆ ಜಾರಿ ನಿರ್ದೇಶನಾಲಯ ಮಾಹಿತಿ ಕಲೆ ಹಾಕುತ್ತಿದೆ. ಕಳೆದ ವರ್ಷ ಸಿಬಿಐ ರೋಷನ್ ಬೇಗ್ ಅವರನ್ನು ಬಂಸಿದ್ದು, ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದರು. ದಾಳಿಯ ವೇಳೆ ಮನೆಯಲ್ಲಿದ್ದ ರೋಷನ್ ಬೇಗ್ ಅವರ ಸಮ್ಮುಖದಲ್ಲಿ ಎಲ್ಲಾ ಲಾಕರ್ ಓಪನ್ ಮಾಡಿಸಿ, ದಾಖಲೆ ಪತ್ರಗಳನ್ನು ಇಡಿ ಅಕಾರಿಗಳು ವಶಕ್ಕೆ ಪಡೆದು ಪರಿಶೀಲಿಸಿದರು.

ಜಮೀರ್ ಕ್ಯಾಸಿನೋ ವಹಿವಾಟು !
ಜಮೀರ್ ಅಹಮದ್ ಬೇನಾಮಿ ವಹಿವಾಟು ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಅವರ ಒಡೆತನದ ಬಂಗಲೆ, ಟ್ರಾವೆಲ್ಸ್ ಹಾಗೂ ಶ್ರೀಲಂಕಾದಲ್ಲಿ ಹೊಂದಿರುವ ಕ್ಯಾಸಿನೋ ವಹಿವಾಟು, ಮಗಳ ಮದುವೆ ವೆಚ್ಚ ಹಾಗೂ ಮಗನ ಸಿನಿಮಾ ನಿರ್ಮಾಣದ ವಹಿವಾಟಿನ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಶಾಸಕ ಸೇರಿ 6 ಮಂದಿ ವಿಚಾರಣೆ:
ಜಮೀರ್ ಅಹಮದ್, ಜಮೀಲ್, ಶಕೀಲ್, ಅದಿಲ್ , ಫಾಸಿಲ್ ಸೇರಿ ಆರು ಮಂದಿಯನ್ನು ಪ್ರತ್ಯೇಕವಾಗಿ ಜಾರಿ ನಿರ್ದೇಶನಾಲಯದ ಅಕಾರಿಗಳು ವಿಚಾರಣೆ ನಡೆಸಿದರು. ಈ ವೇಳೆ ಮಹತ್ವದ ವಿಚಾರಗಳು ಹೊರಬಿದ್ದಿವೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ