4.5 ಕೋಟಿ ರೂ.ಮೌಲ್ಯದ ರಕ್ತಚಂದನ ವಶ, ಇಬ್ಬರ ಸೆರೆ

ಬೆಂಗಳೂರು: ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ರಕ್ತಚಂದನದ ಮರದ ತುಂಡುಗಳನ್ನು ಕಳ್ಳಸಾಗಣೆ ಮಾಡಿಕೊಂಡು ತಂದು ನಗರದಲ್ಲಿ ದಾಸ್ತಾನು ಮಾಡಿ ವಿದೇಶಗಳಿಗೆ ಸರಬರಾಜು ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಸಿ 4.5 ಕೋಟಿ ರೂ. ಬೆಲೆಬಾಳುವ 9 ಟನ್ ತೂಕದ ರಕ್ತಚಂದನ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಆನಂದಕುಮಾರ್ (51) ಹಾಗೂ ಅನಿಲ್ ಸಿಂಘ (47) ಬಂತ ಆರೋಪಿಗಳು.

ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಿಂದ ರಕ್ತಚಂದನದ ಮರಗಳನ್ನು ಕಳ್ಳಸಾಗಾಣಿಕ ಮಾಡಿಕೊಂಡು ತಂದು ವಿದೇಶಗಳಿಗೆ ಸರಬರಾಜು ಮಾಡಲು ಬನ್ನೇರುಘಟ್ಟ ರಸ್ತೆಯ ಹೊಮ್ಮದೇವನಹಳ್ಳಿ ಮುಖ್ಯರಸ್ತೆಯ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದರು.

ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಕಮ್ಮನಹಳ್ಳಿ-ಗೊಟ್ಟಿಗೆರೆ ಆರೋಪಿಗಳು ಮುಖ್ಯರಸ್ತೆಯ ಬಾಬ್ಜೀ ಲೇಕ್ವ್ಯೂ ಅಪಾರ್ಟ್‍ಮೆಂಟ್ ಮುಂಭಾಗದ ರಸ್ತೆಯಲ್ಲಿ ಬಿಳಿ ಬಣ್ಣದ ಪೋರ್ಡ್ ಎಂಡೋವರ್ ಕಾರಿನಲ್ಲಿ ರಕ್ತಚಂದನದ ಮರದ ತುಂಡನ್ನು ತಂದು ಮಾರಾಟ ಮಾಡಲು ಗಿರಾಕಿಗಳಿಗೆ ಕಾಯುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ಮಾಡಿ ಕಾರು ಪರಿಶೀಲಿಸಿದಾಗ ರಕ್ತಚಂದನದ ಒಂದು ದೊಡ್ಡ ತುಂಡು ಇರುವುದು ಕಂಡುಬಂದಿದೆ.

ಈ ಬಗ್ಗೆ ವಿಚಾರಿಸಿದಾಗ ಗಿರಾಕಿಗಳಿಗೆ ಸ್ಯಾಂಪಲ್ ತೋರಿಸಲು ತಂದಿದ್ದುದಾಗಿ ಆರೋಪಿಗಳು ತಿಳಿಸಿದ್ದಾರೆ. ಆರೋಪಿಗಳು ನೀಡಿದ ಮಾಹಿತಿಯಂತೆ ರಕ್ತಚಂದನವನ್ನು ದಾಸ್ತಾನು ಮಾಡಿದ್ದ ಗೋದಾಮಿಗೆ ತೆರಳಿ ಉಳಿದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ