ಕಾರ್ಗಿಲ್ ಸಮರದ ರಿಯಲ್ ಹೀರೊ ವಿಕ್ರಮ್ ಭಾತ್ರಾ ಜೀವನಾಧರಿತ ಹಿಂದಿ ಸಿನಿಮಾ ನಿರ್ಮಾಣ: ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ

ಕಾರ್ಗಿಲ್,ಜು.26- ಕಾರ್ಗಿಲ್ ಸಮರದ ರಿಯಲ್ ಹೀರೊ ವಿಕ್ರಮ್ ಭಾತ್ರಾ ಜೀವನಾಧರಿತ ಹಿಂದಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ನಟಿಸುತ್ತಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ವಿಷ್ಣುವರ್ಧನ್ ಅವರು ಭಾತ್ರಾ ಜೀವನಾಧರಿತ ಶೇರ್‍ಷಾ ಚಿತ್ರ ನಿರ್ದೇಶಿಸುತ್ತಿದ್ದಾರೆ. ಸಿದ್ದಾರ್ಥ್ ಅವರು ಭಾತ್ರಾ ಪಾತ್ರ ನಿರ್ವಹಿಸಲಿದ್ದು, ಇದು ನನಗೆ ಸಿಕ್ಕ ಅಪೂರ್ವ ಅವಕಾಶ ಎಂದು ಬಣ್ಣಿಸಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಪಾಕ್ ಪಡೆಗಳನ್ನು ಧೂಳೀಪಟ ಮಾಡಿ ಕಾರ್ಗಿಲ್ ಪ್ರದೇಶದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಲು ಪ್ರಮುಖ ಕಾರಣಕರ್ತರಾದ ವಿಕ್ರಮ್ ಭಾತ್ರಾ ಹಾಗೂ ಅವರ ಸಹೋದರ ವಿಶಾಲ್ ಭಾತ್ರಾ ಅವರ ಪಾತ್ರದಲ್ಲಿ ಮಲ್ಹೋತ್ರಾ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.

ನನ್ನ ಐದು ವರ್ಷಗಳ ಸಿನಿ ಪಯಣದಲ್ಲಿ ಇದೇ ಮೊದಲ ಭಾರಿಗೆ ರಿಯಲ್ ಹೀರೋಗಳ ಪಾತ್ರ ನಿರ್ವಹಣೆ ಮಾಡುತ್ತಿದ್ದೇನೆ. ಇದಕ್ಕಾಗಿ ನಾನು ಭಾರತೀಯ ಸೇನೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಿದ್ದಾರ್ಥ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ


Fatal error: Allowed memory size of 268435456 bytes exhausted (tried to allocate 20480 bytes) in /home/deploy/projects/kannada.vartamitra.com/wp-includes/wp-db.php on line 1889