ಉಕ್ಕಿನಂಥ ನಾಯಕ, ಗಟ್ಟಿ ಮನುಷ್ಯ ಯಡಿಯೂರಪ್ಪ: ಗದ್ಗರಿತರಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು

ಬೆಂಗಳೂರು,ಜು.26- ಉಕ್ಕಿನಂಥ ನಾಯಕ, ಗಟ್ಟಿ ಮನುಷ್ಯ ಯಡಿಯೂರಪ್ಪ ತಮ್ಮ ವಿದಾಯದ ಭಾಷಣದಲ್ಲಿ ಎರಡು ಬಾರಿ ಗದ್ಗರಿತರಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.

ಇಂದು ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಯಡಿಯೂರಪ್ಪನವರು ಭಾವುಕರಾಗಿ ಕಣ್ಣೀರು ಸುರಿಸಿದರು.

ವಾಜಪೇಯಿ ಅಡ್ವಾಣಿ, ಜೋಷಿಯಂತಹ ನಾಯಕರು ದೇಶದಲ್ಲಿ ಪಕ್ಷ ಸಂಘಟನೆ ಮಾಡುವಂತಹ ಸಂದರ್ಭದಲ್ಲಿ ರಾಜ್ಯಕ್ಕೆ ಆಗಮಿಸಿದಾಗ ನಾವು ಇಲ್ಲಿ 30-40 ಜನರನ್ನು ಸೇರಿಸಲು ಕಷ್ಟಪಡುತ್ತಿದ್ದೆವು. ಆಗ ಅವರು ನಮ್ಮನ್ನು ಬೆನ್ನು ತಟ್ಟಿ ಪ್ರೋತ್ಸಹ ನಿಡಿದರು.

ಅಂತಹ ಸಂಕಷ್ಟ ಸಂದರ್ಭದಿಂದಲೂ ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದೇನೆ ಎಂದು ಹೇಳುತ್ತಾ ಯಡಿಯೂರಪ್ಪ ಗದ್ಗರಿತರಾದರು.

ವಿದಾಯ ಭಾಷಣದ ಕೊನೆಯಲ್ಲಿ ಮಾತನಾಡುತ್ತಾ, 75 ವರ್ಷಗಳಾದರೂ ಅಡ್ವಾಣಿ, ಮುರುಳಿಮನೋಹರ್ ಜೋಷಿ ಅಂತಹ ನಾಯಕರಿಗೆ ಪಕ್ಷದಲ್ಲಿ ಅವಕಾಶ ನೀಡಲಿಲ್ಲ. ಆದರೆ ನನಗೆ 75 ಕಳೆದರೂ ಅಧಿಕಾರ ನಡೆಸಲು ಪಕ್ಷ ಅವಕಾಶ ನೀಡಿತು. ಇದನ್ನು ಶಬ್ದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಇಂದಿಗೆ ಎರಡು ವರ್ಷ ಪೂರೈಸಿದೆ. ನಾನು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತಿದ್ದೇನೆ.

ದುಃಖದಿಂದಲ್ಲ ಅತ್ಯಂತ ಸಂತೋಷದಿಂದ ಹೇಳುತ್ತಲೇ ಭಾವುಕರಾಗಿ ಕಣ್ಣೀರು ಸುರಿಸಿದರು.

 

Image Courtesy: Deccan Cronicle

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ