ಉಕ್ಕು ಕ್ಷೇತ್ರಕ್ಕಾಗಿ 6,322ಕೋ.ರೂ.ಗಳ ಪಿಎಲ್‍ಐ ಸ್ಕೀಮ್ 5.25ಲಕ್ಷ ಉದ್ಯೋಗ ಸೃಷ್ಟಿಗೆ ನೆರವು

ಹೊಸದಿಲ್ಲಿ : ದೇಶದಲ್ಲಿ ಅತ್ಯುನ್ನತ ಗುಣಮಟ್ಟದ ಉಕ್ಕು ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉತ್ಪಾದನಾಸಂಯೋಜಿತ ಪ್ರೋತ್ಸಾಹಕ(ಪಿಎಲ್‍ಐ) ಯೋಜನೆಯೊಂದನ್ನು ಕೇಂದ್ರ ಸಂಪುಟವು ಗುರುವಾರ ಅನುಮೋದಿಸಿತು. 6,322ಕೋ.ರೂ.ಗಳ ಈ ಯೋಜನೆಯಿಂದಾಗಿ ದೇಶದಲ್ಲಿ 68000ನೇರ ಉದ್ಯೋಗ ಮತ್ತು 4,57000ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ.ಅಲ್ಲದೆ ದೇಶ ಉನ್ನತ ಗುಣಮಟ್ಟದ ಉಕ್ಕಿಗಾಗಿ ವಿದೇಶಿ ಅವಲಂಬನೆಯನ್ನು ತಗ್ಗಿಸಿ “ಆತ್ಮನಿರ್ಭರ ಭಾರತ”ಕ್ಕೆ ಶಕ್ತಿ ತುಂಬಲಿದೆ.

ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯ ಬಗ್ಗೆ ವಾರ್ತಾ ಸಚಿವ ಅನುರಾಗ್ ಠಾಕೂರ್ ಅವರು ವಿವರ ನೀಡಿದರು. 2023-242027-28ರವರೆಗಿನ 5ವರ್ಷಗಳ ಅವಯಲ್ಲಿ ದೇಶದಲ್ಲಿ ಉನ್ನತ ದರ್ಜೆಯ ಉಕ್ಕು ಉತ್ಪಾದನೆಗೆ ಭಾರೀ ಉತ್ತೇಜನ ಲಭಿಸಲಿದ್ದು, ರಫ್ತುಕ್ಷೇತ್ರಕ್ಕೂ ಬಲ ನೀಡಲಿದೆ ಎಂದರು.

ಈ ಯೋಜನೆಯಡಿ 40ಸಾವಿರ ಕೋ.ರೂ.ಗಳ ಹೂಡಿಕೆಯಾಗಲಿದ್ದು, ಇದು ಹೆಚ್ಚುವರಿಯಾಗಿ 25ಮೆ.ಟ.ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸಲಿದೆ.ಉತ್ಪಾದನಾ ಉತ್ತೇಜನದಡಿ ಅರ್ಹಉತ್ಪಾದಕರಿಗೆ ಶೇ.4ರಿಂದ 12ರವರೆಗೆ ಪ್ರೋತ್ಸಾಹಕ ಲಭಿಸಲಿದೆ.ಭಾರತದಲ್ಲಿ ನೋಂದಾಯಿತವಾದ ಯಾವುದೇ ಕಂಪೆನಿಯು `ವಿಶೇಷ ದರ್ಜೆಯ ಸ್ಟೀಲ್ ‘ಉತ್ಪಾದನೆಯಲ್ಲಿ ತೊಡಗಬಹುದಾಗಿದೆ.ಕವರ್‍ಕೋಟೆಡ್/ಪ್ಲೇಟೆಡ್ ಸ್ಟೀಲ್ ಉತ್ಪನ್ನಗಳು, ವಿಶೇಷವಾಗಿ ರೈಲುಗಳಿಗಾಗಿ ಬಳಕೆಯಾಗುವ ಹೈಸ್ಟ್ರೆಂಥ್/ವಿಯರ್ ರೆಸಿಸ್ಟೆಂಟ್ ಸ್ಟೀಲ್, ಅಲ್ಲಾಯ್ ಸ್ಟೀಲ್ ಉತ್ಪನ್ನಗಳನ್ನು ಗುರಿಯಾಗಿಟ್ಟುಕೊಂಡು ಈ ಯೋಜನೆ ರೂಪಿತವಾಗಿದೆ.ಇದು ಆತ್ಮನಿರ್ಭರ ಭಾರತ ಯೋಜನೆಗೆ ಬಲತುಂಬುವಂತಿರಲಿದೆ ಎಂದು ಅವರು ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ