ಇಂದು ಎಸ್ಸೆಸ್ಸೆಲ್ಸಿ ಕೊನೆ ಪರೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಭಾಷಾ ವಿಷಯಕ್ಕೆ ಸಂಬಂಸಿದ ಪರೀಕ್ಷೆಗಳು ಗುರುವಾರ ನಡೆಯಲಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆ ನಡೆಯಲಿದೆ.

ಕೋವಿಡ್ ಕಾರಣಕ್ಕಾಗಿ ಈ ಬಾರಿ ಎರಡು ದಿನ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ಮೊದಲ ದಿನ ವಿಷಯವಾರು ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಇದೀಗ ಎರಡನೇ ದಿನದ ಮೂರು ಭಾಷಾ ವಿಷಯಗಳ ಪರೀಕ್ಷೆ ಗುರುವಾರ ನಡೆಯಲಿದೆ.

ಬೆಳಗ್ಗೆ 10.30 ರಿಂದ 1.30ರವರೆಗೆ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕøತ, ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ, ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್ ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕøತ, ಕೊಂಕಣಿ, ತುಳು ಎನ್‍ಎಸ್‍ಕ್ಯೂಎಫ್ – ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯುಟಿ ಅಂಡ್ ವೆಲ್ ನೆಸ್ ವಿಷಯಗಳಿಗಾಗಿ ನಡೆಯಲಿದೆ. 4,885 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪ್ರಥಮ ಭಾಷೆಯಲ್ಲಿ 8,19,694 ವಿದ್ಯಾರ್ಥಿಗಳಲ್ಲಿ ಹೊಸಬರು 7,83,881, ಖಾಸಗಿ ಅಭ್ಯರ್ಥಿಗಳು 21,803 ಹಾಗೂ 14,010 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದ್ವಿತೀಯ ಭಾಷೆಯನ್ನ 8,27,988 ಇದರಲ್ಲಿ ಹೊಸಬರು 7,83,881, ಖಾಸಗಿ ಅಭ್ಯರ್ಥಿಗಳು 21,803 ಹಾಗೂ 22,304 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆಯಲಿದ್ದಾರೆ. ತೃತೀಯ ಭಾಷೆಯನ್ನ 8,17,640 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಹೊಸಬರು 7,83,881, ಖಾಸಗಿ ಅಭ್ಯರ್ಥಿಗಳು 21,803 ಹಾಗೂ 11,956 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ