ಖ್ಯಾತ ನಟ ದರ್ಶನ್ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿಲ್ಲ

ಮೈಸೂರು, ಜು.15- ಖ್ಯಾತ ನಟ ದರ್ಶನ್ ಅವರು ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿಲ್ಲ ಎಂದು ನಗರದ ಸಂದೇಶ್ ದಿ ಪ್ರಿನ್ಸ್ ಹೊಟೇಲ್ ಮಾಲೀಕರಾದ ಸಂದೇಶ್ ನಾಗರಾಜ್ ಅವರ ಪುತ್ರ ಸಂದೇಶ್ ತಿಳಿಸಿದ್ದಾರೆ.

ಈ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂದೇಶ್, ನಮ್ಮ ಹೊಟೇಲ್‍ನಲ್ಲಿ ಸಣ್ಣಪುಟ್ಟ ಗಲಾಟೆ ನಡೆದಿರುವುದು ನಿಜ. ದರ್ಶನ್ ಆಗಲಿ, ಅವರ ಕಡೆಯವಯರಾಗಲಿ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿಲ್ಲ ಎಂದರು.

ಗಲಾಟೆ ಸಂದರ್ಭದಲ್ಲಿ ದರ್ಶನ್ ಬೈದಿರುವುದು ನಿಜ. ನಾನು ಸಮಾಧಾನಪಡಿಸಿ ರೂಂಗೆ ಕಳುಹಿಸಿದೆ ಎಂದರು.

ನನ್ನ ಹೊಟೇಲ್‍ಗೆ ಕಸ್ಟಮರ್ ಹಾಗೂ ಸಿಬ್ಬಂದಿ ಇಬ್ಬರೂ ಬೇಕು. ಸಿಬ್ಬಂದಿ ಬಳಿ ನಾನೇ ಕ್ಷಮೆ ಕೇಳಿದ್ದೇನೆ. ಒಂದೊಂದು ಸಲ ಈ ರೀತಿ ಘಟನೆ ನಡೆಯುತ್ತದೆ ಎಂದರು.

ಒಂದು ವೇಳೆ ದೊಡ್ಡ ಗಲಾಟೆ ನಡೆದಾಗ ಅದನ್ನು ನಿಯಂತ್ರಿಸಲಾಗದಿದ್ದರೆ ಪೊಲೀಸರನ್ನು ಕರೆಸಲಾಗುತ್ತದೆ. ಆದರೆ, ದರ್ಶನ್ ಬಂದ ಸಂದರ್ಭದಲ್ಲಿ ಅಷ್ಟೊಂದು ದೊಡ್ಡ ಘಟನೆ ನಡೆದಿಲ್ಲ ಎಂದು ಸಂದೇಶ್ ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ