ದೇಶದ ಮೊದಲ ಕೋವಿಡ್ ಸೋಂಕಿತೆಗೆ ಇದೀಗ ಮತ್ತೆ ಕೊರೋನಾ ಸೋಂಕು

ತ್ರಿಶೂರು: ದೇಶದ ಮೊದಲ ಕೊರೋನಾ ಸೋಂಕಿತೆ ಎಂದು ಗುರುತಿಸಿಕೊಂಡಿರುವ ವೈದ್ಯಕೀಯ ವಿದ್ಯಾರ್ಥಿನಿಯಲ್ಲಿ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದಾಗಿ ಕೇರಳದ ಆರೋಗ್ಯ ಇಲಾಖೆ ಮಂಗಳವಾರ ತಿಳಿಸಿದೆ.

ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಈಕೆಯ ಆರ್‍ಟಿ-ಪಿಸಿಆರ್ ಪಾಸಿಟಿವ್ ಬಂದಿದ್ದು , ಮತ್ತೆ ಸೋಂಕು ತಗಲಿದೆ.ಆದರೆ ಈಕೆಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂಬುದಾಗಿ ತ್ರಿಶೂರಿನ ಡಿಎಂಒ ಡಾ.ಕೆ.ಜೆ.ರೀನಾ ತಿಳಿಸಿದ್ದಾರೆ.

ಈಕೆಯ ಸ್ಯಾಂಪಲ್‍ನನ್ನು ಹೆಚ್ಚಿನ ಪರೀಕ್ಷೆಗಾಗಿ ದಿಲ್ಲಿಗೆ ಒಯ್ಯಲಾಗುವುದು. ಆರ್‍ಟಿ-ಪಿಸಿಆರ್ ಪಾಸಿಟಿವ್ ಆಗಿತ್ತು.ಆ್ಯಂಟಿಜೆನ್ ನೆಗೆಟಿವ್ ಆಗಿತ್ತು. ಈಕೆಯೀಗ ಮನೆಯಲ್ಲಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

2020ರ ಜ.30ರಂದು ಈಕೆ ಸೆಮಿಸ್ಟರ್ ರಜೆಯಲ್ಲಿ ಊರಿಗೆ ಬಂದಿದ್ದಾಗ ಆಕೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು.ಈ ಮೂಲಕ ಭಾರತದಲ್ಲೂ ಮೊದಲ ಕೋವಿಡ್-19ಪ್ರಕರಣ ದಾಖಲಾಗಿತ್ತು.ಮೂರು ವಾರಗಳ ಕಾಲ ಈಕೆ ತ್ರಿಶೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಎರಡು ಬಾರಿಯ ಪರೀಕ್ಷೆಯಲ್ಲೂ ನೆಗೆಟಿವ್ ಬಂದಿದ್ದು, ಚೇತರಿಸಿಕೊಂಡಿರುವುದು ದೃಢಪಟ್ಟ ಬಳಿಕ ಫೆ.20ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಳು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ