ನೂತನ ಸಚಿವರಿಗೆ ಪ್ರಧಾನಿ ಕಿವಿಮಾತು: ಶಿಸ್ತುಬದ್ಧ ಸಾರ್ವಜನಿಕ ಸೇವೆಗೆ ಒತ್ತು, ಮಾಧ್ಯಮಗಳಿಗೆ ಅನಗತ್ಯ ಹೇಳಿಕೆ ಬೇಡ

**EDS: VIDEO GRAB** New Delhi: Prime Minister Narendra Modi addresses the farmers of Madhya Pradesh, in New Delhi, Friday, Dec. 18, 2020. (PTI Photo)(PTI18-12-2020_000058B)

ಹೊಸದಿಲ್ಲಿ: ಸಾರ್ವಜನಿಕ ಸೇವೆಯ ತಮ್ಮ ಕೆಲಸವನ್ನು ಶಿಸ್ತುಬದ್ಧವಾಗಿ ಮಾಡುವುದಕ್ಕೆ ಒತ್ತು ನೀಡಿ. ಅನಗತ್ಯವಾಗಿ ಮಾಧ್ಯಮದೊಂದಿಗೆ ಮಾತನಾಡದೆ ಕೆಲಸದ ಕುರಿತು ತಮ್ಮ ಪೂರ್ವಾಕಾರಿಗಳ ಸಲಹೆಗಳನ್ನು ಪಡೆಯುವಂತೆ ನೂತನ ಸಚಿವರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ. ನೂತನ ಸಂಪುಟ ಸಚಿವರ ಜೊತೆ ನಡೆಸಿದ ಸಭೆಯಲ್ಲಿ ಪ್ರಧಾನಿಯವರು ನೂತನ ಸಚಿವರಿಗೆ ಮಾರ್ಗದರ್ಶನ ಮಾಡಿದರು.

ಕೈಬಿಟ್ಟ ಸಚಿವರ ಬಗ್ಗೆ ಶ್ಲಾಘನೆ
ಕೇಂದ್ರ ಸಂಪುಟ ವಿಸ್ತರಣೆಯ ವೇಳೆ ಸಂಪುಟದಿಂದ ಕೈಬಿಡಲಾದ ಸಚಿವರ ಬಗ್ಗೆ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿಯವರು, ಅವರನ್ನು ಭೇಟಿ ಮಾಡಿ ಅವರಿಂದ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಸೂಕ್ತ ಮಾರ್ಗದರ್ಶನ ಪಡೆಯುವಂತೆ ಸೂಚಿಸಿದರು.ಸಚಿವರು ಸಮಯ ಪರಿಪಾಲನೆಗೆ ಒತ್ತು ನೀಡಿ ಸಾರ್ವಜನಿಕ ಸೇವೆಯ ಮೇಲೆಯೇ ಗಮನ ಕೇಂದ್ರೀಕರಿಸಬೇಕು.ಅನಗತ್ಯವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುವುದರಿಂದ ದೂರ ಇರಬೇಕು.ಸಚಿವರು ಸಮಯ ಪರಿಪಾಲನೆಗೆ ಒತ್ತು ನೀಡಿ ಸಾರ್ವಜನಿಕ ಸೇವೆಯ ಮೇಲೆಯೇ ಗಮನ ಕೇಂದ್ರೀಕರಿಸಬೇಕು.ಅನಗತ್ಯವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುವುದರಿಂದ ದೂರ ಇರುವಂತೆಯೂ ಅವರು ತಿಳಿಸಿದ್ದಾರೆ.

ಕೋವಿಡ್ ವಿರುದ್ಧ ಕಟ್ಟೆಚ್ಚರದ ಹೆಜ್ಜೆ
ಕೋವಿಡ್ -19ರ ವಿರುದ್ಧದ ಸಮರವನ್ನು ನಾವು ತೀವ್ರಗೊಳಿಸಬೇಕಾಗಿದೆ. ಇಲ್ಲಿ ಯಾವುದೇ ನಿಧಾನಗತಿಯು ಕೋವಿಡ್ -19 ವಿರುದ್ಧದ ಭಾರತದ ಹೋರಾಟವನ್ನು ಹಳಿ ತಪ್ಪಿಸಬಹುದು. ಒಂದೇ ಒಂದು ತಪ್ಪಿನಿಂದ ವೈರಸ್ ಅನ್ನು ಸೋಲಿಸುವ ಹೋರಾಟ ದುರ್ಬಲವಾಗಿಬಿಡಬಹುದು ಮತ್ತು ನಾವು ಗುರಿ ತಲುಪುವಲ್ಲಿ ನಮ್ಮನ್ನು ಎಡವುವಂತೆ ಮಾಡಬಹುದು ಎಂದು ಮೋದಿಯವರು ಸಭೆಯಲ್ಲಿ ಎಚ್ಚರಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಜನನಿಬಿಡ ಸ್ಥಳಗಳ ಫೋಟೊ , ವಿಡಿಯೋಗಳು ಹರಿದಾಡುತ್ತಿವೆ. ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರಗಳಿಲ್ಲದೆ ನಡೆದುಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.ಇದು ಒಳಿತಿನ ಸಂಗತಿಯಲ್ಲ. ಇದು ನಮ್ಮೊಳಗೆ ಭೀತಿಯ ಭಾವವನ್ನು ಮೂಡಿಸಬೇಕು ಮತ್ತು ಇಂತಹ ನಡವಳಿಕೆಗಳ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಮೋದಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ