ಮೇಕೆದಾಟು ಯೋಜನೆಯಿಂದ ಕರ್ನಾಟಕ, ತಮಿಳುನಾಡು ಎರಡೂ ರಾಜ್ಯಕ್ಕೂ ಅನುಕೂಲ; ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು July05: ಕೆಆರ್‍ಎಸ್ ಹಾಗೂ ಮಾರ್ಕಂಡೇಯ ಡ್ಯಾಂ ವಿಚಾರವಾಗಿ ತಮಿಳುನಾಡು ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದ್ದು, ಈ ವಿಷಯವಾಗಿ ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮಿಳುನಾಡು ಹಿಂದಿನಿಂದಲೂ ಕಾವೇರಿ ವಿಚಾರವಾಗಿ, ಹಾಗೂ ಕಾವೇರಿ ನದಿಯ ನೀರಿನ ವಿಚಾರವಾಗಿ ತಗಾದೆ ತೆಗೆಯುತ್ತಾ ಬಂದಿದೆ. ನ್ಯಾಯಾಧಿಕರಣ ತೀರ್ಮಾನ ಆದ ಮೇಲೆ ಅವರಿಗೆ ಸ್ಪಷ್ಟವಾಗಿದೆ. ಮೇಕೆದಾಟು ನಮ್ಮ ವ್ಯಾಪ್ತಿಯಲ್ಲಿದೆ. ಅವರ ಪಾಲಿನ ನೀರಿಗೆ ಯಾವುದೇ ತೊಂದರೆ ಆಗಲ್ಲ. ಆದರೂ ಅವರು ಸುಪ್ರೀಂಕೋರ್ಟ್ ಗೆ ಹೋಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಮಾರ್ಕಂಡೇಯ ಜಲಾಶಯ ವಿಷಯವಾಗಿ ಮೊದಲಿನಿಂದಲೂ ತಮಿಳುನಾಡು ತಗಾದೆ ತೆಗೆಯುತ್ತಿದೆ. ಇದೆಲ್ಲ ರಾಜಕೀಯ, ಹೊಸ ಸರ್ಕಾರ ಬಂದಿದೆ. ಸಣ್ಣ ವಿಚಾರ ದೊಡ್ಡದು ಮಾಡ್ತಿದ್ದಾರೆ. ಕಾನೂನಾತ್ಮಕವಾಗಿ ನಾವು ಸರಿಯಾಗಿ ಇದ್ದೇವೆ. ನಾವು ಸುಪ್ರೀಂಕೋರ್ಟ್ ನಲ್ಲಿ ಹೋರಾಟ ಮಾಡ್ತಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ಮೇಕೆದಾಟು ವಿಚಾರವಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮಿಳುನಾಡು ಸಿಎಂಗೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಬೊಮ್ಮಾಯಿ ಅವರು, ತಮಿಳುನಾಡು ಸಿಎಂ ಇದಕ್ಕೆ ಸ್ಪಂದಿಸಬೇಕು. ನಮ್ಮ ಮೇಕೆದಾಟು ಯೋಜನೆಯಿಂದ ಇಬ್ಬರಿಗೂ ಅನುಕೂಲವಾಗಲಿದೆ. ನಮಗೆ ಕುಡಿಯುವ ನೀರು ಸಿಗುತ್ತೆ, ಮಳೆ ಕಡಿಮೆಯಾದಾಗ ಅವರ ಪಾಲಿನ ನೀರನ್ನ ಕೊಡಲು ಸಾಧ್ಯವಾಗುತ್ತೆ. ಎರಡು ರಾಜ್ಯಕ್ಕೆ ಅನುಕೂಲ ಆಗುತ್ತೆ ಎಂದೂ ಗೊತ್ತಿದ್ದರೂ ಕೂಡ ತಮಿಳುನಾಡಿನವರು ಸುಪ್ರೀಂ ಕೋರ್ಟ್ ನಲ್ಲಿ ಅಬ್ಜೆಕ್ಷನ್ ಹಾಕಿದ್ದಾರೆ. ಕೋಟ್ರ್ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ 17 ಜನ ಸೇರಿದಂತೆ ಯಾರೂ ಬೇಕಾದರೂ ಸೇರ್ಪಡೆಯಾಗಬಹುದು ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ. ಕಾಂಗ್ರೆಸ್ ಗೆ ಈಗಿರುವ ಶಕ್ತಿ ಸಾಲದು. ಆಮದು ಶಕ್ತಿಯ ಅವಶ್ಯಕತೆ ಇದೆ. ಹೀಗಾಗಿ ಅವರ ಆತಂಕ ಡಿ.ಕೆ. ಶಿವಕುಮಾರ್ ಹೇಳಿಕೆಯಲ್ಲಿ ಕಾಣುತ್ತೆ ಎಂದು ವ್ಯಂಗ್ಯವಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ