ರಾಜಪಥದಲ್ಲಿ ರಾಮ! ಎದ್ದುನಿಂತ ನಮಿಸಿದ ಭಕ್ತರು

ಹೊಸದಿಲ್ಲಿ:ರಾಷ್ಟ್ರರಾಜಧಾನಿ ರಾಜಪಥದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರ ಮಾದರಿಯನ್ನು ಉತ್ತರ ಪ್ರದೇಶ ಪ್ರದರ್ಶಿಸಿದ್ದು ಸ್ತಬ್ಧಚಿತ್ರ ಮೆರವಣಿಗೆ ಬರುತ್ತಿದ್ದಂತೆ ಹಲವು ಸಚಿವರು ಸೇರಿ ನೂರಾರು ಮಂದಿ ಎದ್ದುನಿಂತು ಗೌರವ ತೋರಿದ್ದಾರೆ.
ರಾಮಮಂದಿರ ನಿರ್ಮಾಣ ದೇಶದ ಐತಿಹಾಸಿಕ ಕಾರ್ಯಗಳಲ್ಲೊಂದಾಗಿದ್ದು,ದೇಶದ ವಿವಿಧೆಡೆ ಇರುವ ರಾಮ ಭಕ್ತರು ಕೂಡ ಈಗಾಗಲೇ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಮರ್ಪಿಸುತ್ತಿದ್ದಾರೆ.
ಈ ನಡುವೆ ಗಣರಾಜ್ಯೋತ್ಸವದಲ್ಲಿ ಉತ್ತರ ಪ್ರದೇಶದ ಸ್ತಬ್ಧಚಿತ್ರವಾಗಿ ರಾಮಮಂದಿರ ಮಾದರಿಯನ್ನೇ ಪ್ರದರ್ಶಿಸಲಾಗಿದ್ದು, ವಾಲ್ಮೀಕಿ ಮಹರ್ಷಿಗಳು ರಾಮಾಯಣ ರಚಿಸುತ್ತಿರುವುದು ಮುಂಭಾಗದಲ್ಲಿ ಮಂದಿರ ವಿನ್ಯಾಸ ಹಿಂಭಾಗದಲ್ಲಿ ಮಾಡಲಾಗಿದೆ. ಜತೆಗೆ ರಾಮಯಾಣದ ಹಲವು ದೃಶ್ಯಗಳು, ಅಯೋಧ್ಯೆ ದೀಪೆÇೀತ್ಸವದ ದೃಶ್ಯಗಳನ್ನೂ ಕೂಡ ಸ್ತಬ್ಧಚಿತ್ರ ಒಳಗೊಂಡಿತ್ತು.
2019ರಲ್ಲಿ ಸುಪ್ರೀಂಕೋರ್ಟ್ ಮಂದಿರ ಪರವಾಗಿ ತೀರ್ಪ ನೀಡಿದ ಬಳಿಕ 2020ರ ಆಗಸ್ಟ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದು,ಶೀಘ್ರದಲ್ಲೇ ನಿರ್ಮಾಣ ಕಾರ್ಯವೂ ಆರಂಭಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ