2ನೇ ಹಂತದಲ್ಲಿ ಮೋದಿ, ಸಿಎಂಗಳಿಗೆ ಲಸಿಕೆ

ಹೊಸದಿಲ್ಲಿ: ಜನವರಿ 16ರಂದು ದೇಶಾದ್ಯಂತ ಚಾಲನೆ ನೀಡಲಾಗಿರುವ ಕೊರೋನಾ ಲಸಿಕೆ ಅಭಿಯಾನದ ಎರಡನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಗಳು ಲಸಿಕೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅದೇ ರೀತಿ 50 ವರ್ಷಕ್ಕಿಂತ ಮೇಲ್ಪಟ್ಟ ಇತರೆ ರಾಜಕಾರಣಿಗಳಿಗೆ ಮುಂದಿನ ಹಂತದಲ್ಲಿ ಲಸಿಕೆ ನೀಡಲಾಗುವುದು ಎಂದು
ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ಪ್ರಧಾನಿ ಮೋದಿ ತಿಳಿಸಿದ್ದರು.
ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸ್, ಸಶಸ್ತ್ರ ಪಡೆಗಳು, ಪೌರ ಕಾರ್ಮಿಕರಂತಹ ಮುಂಚೂಣಿ ಕಾರ್ಯಕರ್ತರ ಬಳಿಕ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ನಂತರ ಮುಂದಿನ ದಿನಗಳಲ್ಲಿ ಮಧುಮೇಹ, ಹೃದಯ ಸಂಬಂ ಸಮಸ್ಯೆ, ಅಕ ರಕ್ತದೊತ್ತಡ ಸೇರಿದಂತೆ ಇತರೆ ಸಮಸ್ಯೆಗಳಿಂದ ಬಳಲುತ್ತಿರುವ 50 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಿಗೆ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಕಳೆದ ನವೆಂಬರ್ 24ರಂದು ಮೋದಿ ಅವರು ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ಲಸಿಕೆಯ ತಾತ್ಕಾಲಿಕ ಆದ್ಯತೆ ಕುರಿತು ಚರ್ಚಿಸಲಾಗಿದೆ. 50 ವರ್ಷ ಮೇಲ್ಪಟ್ಟ ಗುಂಪಿನವರನ್ನು ಹಿರಿಯ ನಾಗರಿಕರ ವರ್ಗದವರೊಂದಿಗೆ ಸೇರ್ಪಡಿಸಿ ಆದಷ್ಟು ಬೇಗ ಲಸಿಕೆ ನೀಡುವ ಕುರಿತೂ ಸಹ ಚರ್ಚೆ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ