ಭಾರತದ ಭೂಮಿ ಕಬಳಿಸಲು ಬಂದರೆ ತಕ್ಕ ಪಾಠ: ಭಾರತ ವಿವಾದಿತ ಪ್ರದೇಶದಲ್ಲಿ ಚೀನಾ ಹಳ್ಳಿ ನಿರ್ಮಾಣ

ಹೊಸದಿಲ್ಲಿ:ನೆರೆ ರಾಷ್ಟ್ರಗಳ ಭೂಮಿ ಕಬಳಿಸುವ ಚೀನಾ ಮತ್ತೆ ತನ್ನ ಕುತಂತ್ರ ಮುಂದುವರಿಸಿದ್ದು,ಭಾರತದ ಅರುಣಾಚಲ ಪ್ರದೇಶದ 4-5 ಕಿ.ಮೀ ಗಡಿ ವ್ಯಾಪ್ತಿಯಲ್ಲಿ ಒಂದು ಹಳ್ಳಿ ನಿರ್ಮಿಸಿರುವುದನ್ನು ಸ್ಯಾಟ್‍ಲೈಟ್ ಚಿತ್ರಗಳು ಪತ್ತೆಹಚ್ಚಿವೆ ಎಂದು ಮೂಲಗಳು ತಿಳಿಸಿವೆ.
ಗ್ಯಾಲ್ವಾನ್ ಗಡಿ ಬಿಕ್ಕಟ್ಟು ಸಂಬಂಸಿದಂತೆ ಈಗಾಗಲೇ ಭಾರತದೊಂದಿಗೆ ಕ್ಯಾತೆ ತೆಗೆದಿರುವ ಚೀನಾ, ಇಷ್ಟು ವರ್ಷದಿಂದ ತಟಸ್ಥವಾಗಿದ್ದ ಪ್ರದೇಶದಲ್ಲಿ ಈಗ ಇದಕ್ಕಿದ್ದಂತೆ 101 ಮನೆಗಳಿರುವ ಹಳ್ಳಿ ನಿರ್ಮಿಸಿದೆ.
ಭಾರತಕ್ಕೆ ಸೇರಿದ ಭೂಮಿಯಾದರೂ 1959ರಿಂದಲೂ ಈ ಪ್ರದೇಶದ ಮೇಲೆ ಚೀನಾ ನಿಯಂತ್ರಣ ಸಾಸುತ್ತಿದ್ದು ಪ್ರದೇಶ ಸಂಬಂಸಿದಂತೆ ವಿವಾದವೂ ಇದೆ. ಆದಾಗ್ಯೂ ಇಲ್ಲಿ ಕೇವಲ ಚೀನಾ ಆರ್ಮಿ ಪೊಸ್ಟ್‍ಗಳಷ್ಟೇ ನಿಯೋಜನೆಗೊಂಡಿದ್ದವು.
ಆದರೀಗ ಉದ್ಧಟತನ ತೋರುತ್ತಿರುವ ಚೀನಾ ಭಾರತದ ವಿರುದ್ಧ ಮತ್ತೆ ಕುತಂತ್ರ ರೂಪಿಸಲು ಹಳ್ಳಿಗಳ ನಿರ್ಮಾಣ ಮಾಡಿದ್ದು, ಇದು ಅಧ್ಯಕ್ಷ ಕ್ಸಿ ಜಿನ್‍ಪಿಂಗ್‍ಸರ್ವಾಕಾರದ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ