ವೂಹಾನ್ ಪ್ರದೇಶ ಭೇಟಿ ಕುರಿತು ಸ್ಪಷ್ಟ ಮಾಹಿತಿ ಇಲ್ಲ 14ರಂದು ಡಬ್ಲ್ಯುಎಚ್‍ಒ ತಂಡ ಚೀನಾಗೆ ಭೇಟಿ

ಬೀಜಿಂಗ್: ಕೊರೋನಾ ರೋಗ ಮೂಲದ ತನಿಖೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಯ (ಡಬ್ಲ್ಯು ಎಚ್‍ಒ) ತಜ್ಞರ ತಂಡ ಗುರುವಾರ ತನ್ನ ದೇಶಕ್ಕೆ ಭೇಟಿ ನೀಡಲಿದೆ ಎಂದು ಚೀನಾ ತಿಳಿಸಿದೆ.
ಕೊರೋನಾ ಕುರಿತು ಪಾರದರ್ಶಕ ಕ್ರಮ ಅನುಸರಿಸದ ವಿರುದ್ಧ ಡಬ್ಲ್ಯು ಎಚ್‍ಒ ಮತ್ತು ಇತರ ದೇಶಗಳಿಂದ ತೀವ್ರ ಟೀಕೆ ವ್ಯಕ್ತವಾದ ಬಳಿಕ ಚೀನಾ ಕೊನೆಗೂ ತಜ್ಞರ ತಂಡದ ಆಗಮನಕ್ಕೆ ಒಪ್ಪಿಗೆ ನೀಡಿದೆ.
ಪರಿಣತರ ತಂಡವು ಚೀನಾ ತಜ್ಞರ ಜತೆಗೂಡಿ ಕಾರ್ಯನಿರ್ವಹಿಸಲಿದೆ. ಆದರೆ, ಕೊರೊನಾ ಮೊದಲಿಗೆ ಕಾಣಿಸಿಕೊಂಡ ವೂಹಾನ್‍ಗೆ ತಂಡ ಭೇಟಿ ನೀಡುವುದೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಜ.14ರಂದು ವಿಜ್ಞಾನಿಗಳ ತಂಡ ಚೀನಾಗೆ ಭೇಟಿ ನೀಡಲಿದೆ ಎಂದು ಆ ದೇಶದ ನ್ಯಾಷನಲ್ ಹೆಲ್ತ್ ಕಮೀಶನ್ ಸೋಮವಾರ ತಿಳಿಸಿದೆ. ಕೆಲವರು ಚೀನಾಗೆ ಪ್ರಯಾಣಿಸುತ್ತಿದ್ದರೂ ತಜ್ಞರ ತಂಡ ಪ್ರವೇಶಕ್ಕೆ ಚೀನಾ ಒಪ್ಪಿಗೆ ನೀಡದಿರುವ ಕುರಿತು ಕಳೆದ ವಾರ ಡಬ್ಲ್ಯುಎಚ್‍ಒ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸೂಸ್ ಅವರು ಛೀಮಾರಿ ಹಾಕಿದ ಬಳಿಕ ಪರಿಣತರ ತಂಡದ ಪ್ರವೇಶಕ್ಕೆ ಚೀನಾ ದಿನಾಂಕ ನಿಗದಿಪಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ