ಭಾರತೀಯ ವಿಜ್ಞಾನಿಗಳು ಕಾರ್ಯಕ್ಕೆ ಪ್ರಧಾನಿ ಶ್ಲಾಘನೆ ಶೀಘ್ರವೇ ಲಸಿಕಾ ಬೃಹತ್ ಕಾರ್ಯಕ್ರಮ

ಹೊಸದಿಲ್ಲಿ: ಶೀಘ್ರದಲ್ಲಿಯೇ ವಿಶ್ವದ ಲಸಿಕೆ ಬೃಹತ್ ಕಾರ್ಯಕ್ರಮವನ್ನು ಭಾರತ ಆರಂಭಿಸಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಿಜ್ಞಾನಿಗಳು ಎರಡು ಕೊರೋನಾ ನಿರೋಧಕ ಲಸಿಕೆಗಳನ್ನು ಯಶಸ್ವಿಯಾಗಿ ಅಭಿವೃದ್ಧಿ ಪಡಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಭೌತಿಕ ಪ್ರಯೋಗಾಲಯ(ಸಿಎಸ್‍ಐಆರ್-ಎನ್ ಪಿಎಲ್)ದ 75ನೇ ವರ್ಷಾಚರಣೆ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಕಾನರೆನ್ಸ್ ಮೂಲಕ ಮಾತನಾಡಿದ ಮೋದಿ, ಲಸಿಕೆ ತಯಾರಿಕೆಯಲ್ಲಿ ವಿಜ್ಞಾನಿಗಳ ಕೊಡುಗೆಗೆ ದೇಶ ಹೆಮ್ಮೆ ಪಡಲಿದ್ದು, ಶೀಘ್ರವೇ ಭಾರತವು ಜಗತ್ತಿನ ಬೃಹತ್ ಲಸಿಕಾ ಕಾರ್ಯಕ್ರಮವನ್ನು ನಡೆಸಲಿದೆ ಎಂದಿದ್ದಾರೆ.
ಹೊಸ ವರ್ಷದಲ್ಲಿ ಭಾರತೀಯ ವಿಜ್ಞಾನಿಗಳು ಒಂದಲ್ಲ ಎರಡು ಕೊರೋನಾ ನಿರೋಧಕ ಲಸಿಕೆಯನ್ನು ತಯಾರಿಸುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. ದೇಶದ ವಿಜ್ಞಾನಿಗಳು ಮತ್ತು ತಂತ್ರಜ್ಞರ ಈ ಶ್ರಮಕ್ಕೆ ಪ್ರತಿ ಭಾರತೀಯನೂ ಋಣಿ. ಅಲ್ಲದೆ ಸಾಂಕ್ರಾಮಿಕದ ಸಂದರ್ಭದಲ್ಲಿ ವಿಜ್ಞಾನಿಗಳ ಬಲಿದಾನವನ್ನು ದೇಶ ಎಂದಿಗೂ ಮರೆಯದು ಎಂದು ಪ್ರಧಾನಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ