ಅಭಿವೃದ್ಧಿಗೆ ವಿಶೇಷ ಒತ್ತು: ಗೋವಿಂದ ಕಾರಜೋಳ

ಕಲಬುರಗಿ: ರಾಜ್ಯ ಸರ್ಕಾರ ಕೊರೋನಾ ಸಂದರ್ಭದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದರೂ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಲಿಲ್ಲ. ವಿಷಮ ಪರಿಸ್ಥಿತಿಯಲ್ಲೂ ಸರ್ಕಾರ ಚೆನ್ನಾಗಿ ಕಾರ್ಯನಿರ್ವಹಿಸಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
2020ರಲ್ಲಿ ಸಂಕಷ್ಟಗಳ ಸರಮಾಲೆಗಳ ಮಧ್ಯದಲ್ಲಿಯೂ ನಮ್ಮ ಅಕಾರಿಗಳು ಒಳ್ಳೆಯ ಕಾರ್ಯ ಮಾಡಿದ್ದಾರೆ ಎಂದರು.
ಸಂಕಷ್ಟಗಳ ಸವಾಲುಗಳನ್ನು ಮೆಟ್ಟಿ ಹೊಸ ವರ್ಷಕ್ಕೆ ಮುನ್ನೆಡೆಯುವುದರ ಜೊತೆಗೆ, ಹಳೆಯದನ್ನು ಮರೆತು ಹೊಸತನದಿಂದ ಅಭಿವೃದ್ಧಿ ಪಥದತ್ತ ಸಾಗೋಣ ಎಂದರು. ನಾಲ್ಕು ತಿಂಗಳ ಬಳಿಕ ಕಲಬುರಗಿಗೆ ಆಗಮಿಸಿದಿರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಪರಿಶೀಲನೆ ಮಾಡಿದ್ದಾರೆ. ಕಂದಾಯ,ಕೃಷಿ ಮಂತ್ರಿ ಸೇರಿದಂತೆ ಇಡೀ ಕ್ಯಾಬಿನೆಟ್ ಬಂದಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ