ಶ್ರೀರಾಮ ಮಂದಿರ ನಿರ್ಮಾಣ ನಿ ಸಮರ್ಪಣಾ ಅಭಿಯಾನ – ಕಿಕ್ಕರ್ ಮ.ವೆಂಕಟರಾಮು ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

ಬೆಂಗಳೂರು: ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಯೋಜನೆಯಂತೆ ರಾಜ್ಯದಲ್ಲಿ ಹಮ್ಮಿಕೊಂಡಿರುವ ರಾಮ ಮಂದಿರ ನಿರ್ಮಾಣ ನಿ ಸಮರ್ಪಣಾ ಅಭಿಯಾನಕ್ಕೆ ಸಮಿತಿ ರಚಿಸಲಾಗಿದೆ.
ಸಮಿತಿಯ ಮುಖ್ಯಸ್ಥರಾಗಿ ಚಾಮರಾಜನಗರ ಸೇವಾಭಾರತಿ ಶಾಲೆಯ ಅಧ್ಯಕ್ಷ ಮ.ವೆಂಕಟರಾಮು ಕಾರ್ಯನಿರ್ವಹಿಸಲಿದ್ದಾರೆ. ಉಪಾಧ್ಯಕ್ಷರನ್ನಾಗಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿವೃತ್ತ ನಿರ್ದೇಶಕಿ ಡಾ.ವಿಜಯಲಕ್ಷ್ಮೀ ದೇಶಮಾನೆ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಮೀನಾ ಚಂದಾವರ್ಕರ್ ಮತ್ತು ವನವಾಸಿ ಕಲ್ಯಾಣ ಆಶ್ರಮ, ಕರ್ನಾಟಕದ ನಿರ್ವಾಹಕ ವಿಶ್ವಸ್ಥರಾದ ನಾ.ತಿಪ್ಪೇಸ್ವಾಮಿ ಕಾರ್ಯದರ್ಶಿಯಾಗಿರುತ್ತಾರೆ.
ಶಿವಮೊಗ್ಗದ ನಿವೃತ್ತ ಬ್ಯಾಂಕ್ ಅಕಾರಿ ಟಿ.ಪಟ್ಟಾಭಿರಾಮ, ಕಲಬುರಗಿಯ ರಾಷ್ಟ್ರೋತ್ಥಾನದ ಆಡಳಿತಾಕಾರಿ ಕೃಷ್ಣ ಜೋಷಿ ಅವರಿಗೆ ಸಹ ಕಾರ್ಯದರ್ಶಿ ಹಾಗೂ ನಿವೃತ್ತ ಐಆರ್‍ಎಸ್ ಅಕಾರಿ ಡಾ.ಪ್ರಕಾಶ್ ಜೆ.ಪಿ ಅವರು ಕೋಶಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಸಮಿತಿ ಸದಸ್ಯರು:
ಕೆ. ರತ್ನ ಪ್ರಭಾ, ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ; ವಿ.ಆರ್.ಗೌರಿಶಂಕರ, ಶೃಂಗೇರಿ ಶಾರದಾ ಪೀಠದ ಆಡಳಿತಾಕಾರಿ; ಮೂಲಚಂದ್ ನಹಾರ್, ತೇರಾಪಂಥ್ ಸಭಾದ ಅಧ್ಯಕ್ಷ; ಡಾ.ವಿಜಯ ಸಂಕೇಶ್ವರ, ಹುಬ್ಬಳ್ಳಿಯ ವಿಆರ್‍ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ; ಎಂ.ಆರ್.ಜಯರಾಮï, ಕೈವಾರ ಶ್ರೀ ಯೋಗಿ ನಾರೇಯಣ ಮಠದ ಧರ್ಮಾಕಾರಿ;
ದೇವೇಂದ್ರಪ್ಪ ಮಾಳಗಿ, ನಿವೃತ್ತ ಡಿವೈಎಸ್‍ಪಿ; ಡಾ.ಸರ್ದಾರ್ ಬಲವೀರ್ ಸಿಂಗ್, ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ; ಮಾನಂದಿ ಸುರೇಶ್, ಭಾರತೀಯ ವಿದ್ಯಾಭವನದ ಕಾರ್ಯದರ್ಶಿ;
ಕಿಮ್ಮನೆ ಜಯರಾಮï, ಶಿವಮೊಗ್ಗದ ಅಡಿಕೆ ವ್ಯಾಪಾರಿ; ವಿವೇಕ್ ಆಳ್ವ, ಮೂಡಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್‍ನ ನಿರ್ವಾಹಕ ವಿಶ್ವಸ್ಥ; ಲಿಂಗರಾಜ್, ದಾವಣೆಗೆರೆಯ ಜಿಎಂ ಸಮೂಹ ಕಂಪೆನಿಗಳ ಮುಖ್ಯಸ್ಥ; ಡಾ.ಗಿರೀಶ್ ಮಾಸೂರಕರ್, ಬಾಗಲಕೋಟೆ ನೇತ್ರ ತಜ್ಞ; ಡಾ.ಟಿ.ಎಸ್.ಸತ್ಯವತಿ, ಬೆಂಗಳೂರಿನ ಸಂಗೀತ ವಿದುಷಿ; ಡಾ.ಮಲ್ಲಿಕಾರ್ಜುನ ಮುಕ್ಕಾ, ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಯ ನಿವೃತ್ತ ಉಪ ನಿರ್ದೇಶಕ ; ಡಾ.ಜೀವರಾಜ್ ಸೊರಕೆ, ಮಂಗಳೂರು ಎಸ್‍ಸಿಎಸ್ ಆಸ್ಪತ್ರೆ ಮುಖ್ಯಸ್ಥ ; ಸತೀಶ ಯಚ್ಚರೆಡ್ಡಿ, ಬಳ್ಳಾರಿಯ ಉದ್ಯಮಿ; ಡಿ.ಎನ್.ಪ್ರಹ್ಲಾದ್, ಇನೋಸಿಸ್ ಸ್ವತಂತ್ರ ನಿರ್ದೇಶಕ; ಜಯಂತ ಹುಂಬರವಾಡಿ, ಬೆಳಗಾವಿ ಅಶೋಕ್ ಐರನ್ ಗ್ರೂಪ್‍ನ ಸಹ ವ್ಯವಸ್ಥಾಪಕ ನಿರ್ದೇಶಕ; ಅರುಣಾ ಠಕಾರೆ, ಕರ್ನಾಟಕ ರಾಷ್ಟ್ರ ಸೇವಿಕಾ ಸಮಿತಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ