ಪಾಕ್‍ನಲ್ಲಿ ದೇಗುಲ ಧ್ವಂಸ 14 ಮಂದಿಯ ಬಂಧನ

ಇಸ್ಲಾಮಾಬಾದ್: ಹಿಂದೂ ದೇಗುಲಕ್ಕೆ ಬೆಂಕಿ ಹಚ್ಚಿ, ಧ್ವಂಸಗೊಳಿಸಿದ ಪ್ರಕರಣ ಸಂಬಂಧ ಶೋಧ ಕಾರ್ಯಾಚರಣೆಯಲ್ಲಿ 14 ದುಷ್ಕರ್ಮಿಗಳನ್ನು ಬಂಸಿರುವುದಾಗಿ ಪಾಕಿಸ್ಥಾನ ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಸಿದಂತೆ ಹಲವು ಮಾನವ ಹಕ್ಕು ಹೋರಾಟಗಾರರಿಂದ, ಪಾಕಿಸ್ಥಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪೊಲಿಸರು ಕೊನೆಗೂ ಕ್ರಮ ಕೈಗೊಂಡಿದ್ದಾರೆ.
ಬುಧವಾರ ಘಟನೆ ನಡೆದಿದ್ದು, ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ 14 ದುಷ್ಕರ್ಮಿಗಳನ್ನು ಬಂಸಲಾಗಿದೆ. ಮಂದಿರ ಧ್ವಂಸಗೊಳಿಸಲು ಸಂಚು ರೂಪಿಸಿದ, ಸಹಾಯ ಮಾಡಿದ ಎಲ್ಲರನ್ನೂ ಬಂಸುವ ತನಕ ಶೋಧ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕ್‍ನ ವಾಯುವ್ಯ ನಗರ ಕರಾಕ್‍ನಲ್ಲಿರುವ ಪುರಾತನ ದೇಗುಲ ಇದಾಗಿದ್ದು, ದೇಗುಲ ನವೀಕರಿಸಲು ಸ್ಥಳೀಯ ಅಕಾರಿಗಳಿಂದ ಕೆಲ ಹಿಂದೂಗಳು ಅನುಮತಿ ಪಡೆದಿದ್ದರು. ಈ ಹಿನ್ನೆಲೆ ಜಮಾಯತ್ ಉಲೇಮಾ ಎ ಇಸ್ಲಾಂ ಪಾರ್ಟಿಗೆ ಸೇರಿದ ಗೂಂಡಗಳು ದೇಗುಲ ಧ್ವಂಸಗೊಳಿಸಿದ್ದಾರೆ .
ಈ ಕುರಿತಂತೆ ಟ್ವೀಟ್ ಮಾಡಿರುವ ಪಾಕಿಸ್ಥಾನದ ಸಾಂಸ್ಕøತಿಕ ಸಚಿವ ನೂರಲ್ ಹಖ್ ಕಾದ್ರಿ, ಮಂದಿರ ಧ್ವಂಸವನ್ನು ಖಂಡಿಸಿದ್ದಾರೆ. ಇಸ್ಲಾಂನಲ್ಲಿ ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳನ್ನು ಧ್ವಂಸಗೊಳಿಸುವ ಅನುಮತಿಯಿಲ್ಲ.ಬದಲಿಗೆ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಿಸುವುದು ಧಾರ್ಮಿಕ, ಸಾಮಾಜಿಕ, ನೈತಿಕ ಹಾಗೂ ಸಾಂವಿಧಾನಿಕ ಜವಾಬ್ದಾರಿ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ