ತರುಣೋದಯ ಸಂಸ್ಕøತ ಸೇವಾ ಸಂಸ್ಥೆಯಿಂದ ಮಹಾಯಜ್ಞ 700ದಿನ ಭಗವದ್ಗೀತೆ ಕಂಠಪಾಠ

ಶಿವಮೊಗ್ಗ: ಭಗವದ್ಗೀತಾ ಕಂಠಪಾಠ ಮಹಾಯಜ್ಞವನ್ನು 700 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ತರುಣೋದಯ ಸಂಸ್ಕøತ ಸೇವಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜೇಂದ್ರರಾವ್ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಸಂಸ್ಕøತ ಭಾರತಿ, ವಾಸವಿ ವಿದ್ಯಾಲಯ ಮತ್ತು ತರುಣೋದಯ ಸಂಸ್ಕøತ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಾಗೂ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಆಯೋಜನೆ ಮಾಡಲಾಗಿದೆ ಎಂದರು.
ಇದು ಸಮಾಜಮುಖಿ ಕಾರ್ಯಕ್ರಮವಾಗಿದ್ದು ಇದರಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಎಲ್ಲಾ ವಯೋಮಾನದವರು, ಸ್ತ್ರೀ, ಪುರುಷರು, ದೇಶದ ಯಾವುದೇ ಭಾಗದ ಆಸಕ್ತರು ನೋಂದಾಯಿಸಿಕೊಂಡು ಆನ್‍ಲೈನ್ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡು ಭಗವದ್ಗೀತೆ ಶ್ಲೋಕಗಳನ್ನು ಕಲಿಯಬಹುದಾಗಿದೆ ಎಂದು ಹೇಳಿದರು.
2022ರ ಡಿ.11ರವರೆಗೆ ಅಭಿಯಾನ
ಈ ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಾಗಿರದೆ ಇದರಲ್ಲಿ ವಿಜ್ಞಾನ, ತತ್ವಜ್ಞಾನ, ಮನೋವಿಜ್ಞಾನ ಮುಂತಾದ ಸಂಗತಿಗಳನ್ನೊಳಗೊಂಡ ಪವಿತ್ರ ಗ್ರಂಥವಾಗಿದೆ ಎಂದ ಅವರು, ಈ ಮಹಾಯಜ್ಞವು 2021ರ ಜನವರಿ 1 ರಿಂದ 2022ರ ಡಿಸೆಂಬರ್ 11ರವರೆಗೆ ಒಟ್ಟು 700 ದಿನಗಳ ಕಾಲ ನಡೆಯುತ್ತದೆ. ಭಗವದ್ಗೀತೆಯಲ್ಲಿ 700 ಶ್ಲೋಕಗಳಿದ್ದು ದಿನಕ್ಕೊಂದು ಶ್ಲೋಕ ಕಂಠಪಾಠ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ನೋಂದಾಯಿಸಿದವರಿಗೆ ಎಲ್ಲಾ ಶ್ಲೋಕಗಳನ್ನು ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕøತದಲ್ಲಿ ಒಟ್ಟಿಗೆ ಕಲಿಸಿಕೊಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ಪೊತ್ಸಾಹ ಅಗತ್ಯ
ಇದನ್ನು ಯಶಸ್ವಿಗೊಳಿಸಲು ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಈ ಮಹಾಯಜ್ಞದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಶಿಕ್ಷಕರು ಭಾಗವಹಿಸಬೇಕು. ಶಿಕ್ಷಕರು ಪೊಷಕರಿಗೆ ಈ ಮಹಾಯಜ್ಞದ ಮಹತ್ವ ತಿಳಿಸಿ ಭಾಗವಹಿಸುವಂತೆ ಪೊತ್ಸಾಹಿಸಬೇಕು, ಮಹಿಳಾ ಮಂಡಳಗಳು ಇದರಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಕøತ ಭಾರತಿ ನಗರ ಅಧ್ಯಕ್ಷ ಎನ್.ವಿ.ಶಂಕರನಾರಾಯಣ, ಜಿಲ್ಲಾ ಸಂಯೋಜಕ ಟಿ.ವಿ.ನರಸಿಂಹಮೂರ್ತಿ, ಎನ್.ಆರ್.ಪ್ರಕಾಶ್, ಮಾಲಾ ರಾಮಚಂದ್ರ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ