ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿಕೆ ರಾಜ್ಯವ್ಯಾಪಿ ಅಟಲ್‍ಜೀ ಕಾವ್ಯ ನೃತ್ಯ ಪ್ರದರ್ಶನ ಆಯೋಜನೆ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಚಿಸಿರುವ ಕಾವ್ಯಗಳನ್ನು ನೃತ್ಯದ ಮೂಲಕ ಪ್ರಸ್ತುತಪಡಿಸುವ ಕಾರ್ಯಕ್ರಮವನ್ನು ರಾಜ್ಯದ ಇತರ ಜಿಲ್ಲೆಗಳಲ್ಲೂ ಆಯೋಜಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.
ನಗರದ ಮಲ್ಲೇಶ್ವರದಲ್ಲಿರುವ ಸೇವಾ ಸದನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಟಲ್ ಕಾವ್ಯ ಕಲಾ ನರ್ತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಜಪೇಯಿ ಅವರ 96ನೇ ಜನ್ಮದಿನ ಅಂಗವಾಗಿ ಶ್ರೀವತ್ಸ ಅವರ ಕಲಾ ತಂಡ ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಅದ್ಬುತವಾಗಿದೆ. ಕಾವ್ಯ ಹಾಗೂ ನೃತ್ಯದ ಮೂಲಕವೂ ವಾಜಪೇಯಿಯವರ ತತ್ವಾದರ್ಶಗಳು ಜನರಿಗೆ ತಲುಪಿಸಬೇಕಿದೆ. ಆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಇತರೆಡೆ ಆಯೋಜಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಅಟಲ್ ಜೀ ಅವರು ಜನಸಂಘ ಕಟ್ಟಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ವಾಜಪೇಯಿ ಅವರಿಗೆ ಅಕಾರದ ಆಸೆ ಇರಲಿಲ್ಲ. ಸಂಘ ಮತ್ತು ದೇಶವನ್ನು ಕಟ್ಟಬೇಕೆಂಬ ಅದಮ್ಯ ಕನಸಿತ್ತು. ಈಗಿನವರು ಅಕಾರಕ್ಕಾಗಿಯೇ ಸಂಘ-ಸಂಸ್ಥೆ ಕಟ್ಟುತ್ತಿದ್ದಾರೆ. ಇದು ಇಂದಿನ ದುರ್ದೈವ ಎಂದು ವಿಷಾದಿಸಿದರು.
ಐಎಸಿಎಫ್ ನಿರ್ದೇಶಕ ಶ್ರೀವತ್ಸ ಶಾಂಡಿಲ್ಯ ಮಾತನಾಡಿ, ಕಲಾವಿದರೂ ತಮ್ಮೊಳಗಿದ್ದ ಅಟಲ್ ಜೀಯವರ ಕನಸನ್ನು ಅವರ ಜನ್ಮದಿನದ ಮೂಲಕ ಪ್ರಸ್ತುತಪಡಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ರಾಜ್ಯದ ಇತರೆ ಯಲ್ಲಿ ಈ ರೀತಿಯ ಕಾವ್ಯ ನೃತ್ಯ ಕಾರ್ಯಕ್ರಮವನ್ನು ಇತರೆಡೆ ನಡೆಸಿಕೊಡಲು ಪ್ರಯತ್ನಿಸುವೆ ಎಂದರು.
ಅಟಲ್ ಕಾವ್ಯ ಕಲಾ ಕಾರ್ಯಕ್ರಮದ ಮೂಲಕ ಅವರು ನಮ್ಮೊಳಗಿದ್ದಾರೆಂದು ತೋರಿಸುವುದು ಕಲಾ ತಂಡ ಉದ್ದೇಶವಾಗಿತ್ತು. ಇದಕ್ಕಾಗಿ ವಾಜಪೇಯಿ ಅವರು ಬರೆದ ಹಾಡುಗಳನ್ನೆ ಆಯ್ಕೆ ಮಾಡಿ, ಐದು ಕಲಾ ಪ್ರಕಾರಗಳಾದ ಭರತನಾಟ್ಯ, ಕುಚುಪುಡಿ, ಕಥಕ್, ಒಡಿಸ್ಸಿ, ಮೋಹಿನಿಯಾಟ್ಟಂ ನೃತ್ಯದ ಮೂಲ ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ ರಾಮಮೂರ್ತಿ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ