ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ರೈತರಿಗೆ ಸ್ವಾಭಿಮಾನದ ಬದುಕು: ಸರ್ಕಾರ ಬದ್ಧ

ಬೆಂಗಳೂರು: ಸರ್ಕಾರ ಪ್ರತಿಯೊಬ್ಬ ರೈತನ ಕಣ್ಣೀರು ಒರೆಸಿ ಅನ್ನದಾತರು ಸ್ವಾಭಿಮಾನ ಹಾಗೂ ಗೌರವದಿಂದ ಬಾಳ್ವೆ ನಡೆಸುವಂತಹ ಸ್ಥಿತಿ ನಿರ್ಮಾಣ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಪ್ರಯುಕ್ತ ಯಶವಂತಪುರದ ಎಂಪಿಎಂಸಿ ಆವರಣದಲ್ಲಿ ನಡೆದ ರೈತ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ವಿವಿಧ ಯೋಜನೆಗಳನ್ನು ಜಾರಿ ಮಾಡಿರೆ. ರೈತರ ಆದಾಯ ದ್ವಿಗುಣ ಮಾಡಲು ಉದ್ದೇಶದಿಂದ ಎಪಿಎಂಪಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ನಾನು 50 ವರ್ಷದ ಹಿಂದೆ ಶಿಕಾರಿಪುರದಲ್ಲಿ ಎಂಪಿಎಂಪಿ ಕಾಯ್ದೆ ತಿದ್ದುಪಡಿಗಾಗಿ ಹೋರಾಟ ಮಾಡಿ. ನನ್ನ ಪುಣ್ಯ ಎಂಬಂತೆ ನಾನು ಮುಖ್ಯಮಂತ್ರಿಯಾಗಿಗ ಜಾರಿ ಮಾಡಿರುವ ಸಂತಸವಾಗುತ್ತಿದೆ ಎಂದರು.
ಕೆಲವು ಸ್ವಾರ್ಥಿಗಳಿಂದ ವಿರೋಧ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳು ರೈತ ಪರವಾಗಿದ್ದರೂ, ಕೆಲವು ಸ್ವಾರ್ಥಿಗಳು ಮಾತ್ರ ಕಾಯ್ದೆಯನ್ನು ವಿರೋಸುತ್ತಿರೆ. ಈ ಕಾಯ್ದೆ ರೈತ ಪರವಾಗಿದ್ದು, ಮುಂದಿನ ದಿನಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸಲಿದೆ. ರೈತರು ಬೆಳೆದ ಬೆಳೆಯನ್ನು ಎಂಪಿಎಂಸಿಯಲ್ಲಿ ಮಾರಾಟ ಮಾಡಬೇಕು ಎಂಬ ನಿಯಮವನ್ನು ತೆಗೆದು ಹಾಕಲಾಗಿದೆ. ಕೃಷಿಕರಿಗೆ ನನ್ನ ಬೆಳೆ ನನ್ನ ಹಕ್ಕನ್ನು ನೀಡಿದ್ದೇವೆ. ದೇಶದಲ್ಲಿ ಎಲ್ಲಿ ಬೇಕಾದರೂ ರೈತ ಬೆಳೆದ ಬೆಳೆಯನ್ನು ಮಾರಾಟ ಮಾಡಬಹುದು ಎಂದರು.
ಎಂಪಿಎಂಪಿ ರೈತರ ಶೋಷಣೆ ತಪ್ಪಿಸಿ ದಲ್ಲಾಳಿಗಳಿಂದ ರೈತರನ್ನು ಪಾರು ಮಾಡಲು ಹೊಸ ಕಾಯ್ದೆಯನ್ನು ಜಾರಿ ಮಾಡಿರೆ. ದೇಶದಲ್ಲಿ ಶೇ.90 ರಷ್ಟು ರೈತ ಈ ಕಾಯ್ದೆಯನ್ನು ಸ್ವಾಗತ ಮಾಡಿರೆ, ಕೆಲವು ಸ್ವಾರ್ಥಿಗಳು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಯಡಿಯೂರಪ್ಪ ಆಕ್ಷೇಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ