ನಾಳೆ ರಾಜ್ಯಾದ್ಯಂತ ಅಟಲ್‍ಜೀ ಸ್ಮರಣೆ: ನಳಿನ್

ಮಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ಡಿ.25ರಂದು ರಾಜ್ಯಾದ್ಯಂತ `ಅಟಲ್ ಜೀ ಸ್ಮರಣೆ ಮತ್ತು ಕಿಸಾನ್ ಸಮ್ಮಾನ್ ದಿನಾಚರಣೆ’ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಗೆ ಸಂಬಂಸಿ ಮಂಗಳೂರಿನ ರಮಣ ಪೈ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿ ಯೋಜನೆಯಡಿ ರೂ.18 ಸಾವಿರ ಕೋಟಿ ಸಹಾಯಧನವನ್ನು ದೇಶದ 9.5ಕೋಟಿ ರೈತರ ಖಾತೆಗಳಿಗೆ ನೇರವಾಗಿ ಜಮೆಗೊಳಿಸಿದ ಬಳಿಕ ಪ್ರಧಾನಿಯವರು 12 ಗಂಟೆಯ ಸುಮಾರಿಗೆ ದೇಶದ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ರೈತರ ಪಾಲಿಗೆ ಇದೊಂದು ಮಹತ್ವದ ದಿನವಾಗಲಿದೆ ಎಂದವರು ಹೇಳಿದರು.
18 ಸಾವಿರ ಹಳ್ಳಿಗಳಿಗೆ ವಿದ್ಯುತ್
ಸ್ವಾತಂತ್ರ್ಯ ಬಂದ ನಂತರವೂ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಇರಲಿಲ್ಲ. ಮೋದಿಯವರು ಪ್ರಧಾನಿಯಾದ ಮೇಲೆ ಈ 18 ಸಾವಿರ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ 1 ಲಕ್ಷ ಕೋಟಿ ಮೊತ್ತವನ್ನು ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. 30 ಸಾವಿರ ಕೋ.ರೂ.ಗಳ ಹೆಚ್ಚುವರಿ ಕಾರ್ಯ ಸಾಧ್ಯತಾ ಬಂಡವಾಳದಲ್ಲಿ ರೈತರಿಗೆ ನಬಾರ್ಡ್‍ನಿಂದ 25 ಸಾವಿರ ಕೋ.ರೂ.ಗಳನ್ನು ವಿತರಿಸಲಾಗಿದೆ. ಇತ್ತೀಚೆಗೆ ಕಬ್ಬು ಬೆಳೆಯುವ ರೈತರ ಹಿತಕ್ಕಾಗಿ 3,500 ಕೋಟಿ ಮೊತ್ತ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ 5 ಕೋಟಿ ಕಬ್ಬು ಬೆಳೆಗಾರರಿಗೆ ಲಾಭವಾಗಲಿದ್ದು ಸಬ್ಸಿಡಿ ಹಣ ನೇರವಾಗಿ ಅವರ ಖಾತೆ ಜಮೆ ಆಗಲಿದೆ. ಪಶು ಸಂಗೋಪನಾ ಮೂಲಸೌಕರ್ಯ ನಿ ಯೋಜನೆ ಅಡಿಯಲ್ಲಿ 15 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಎಂ., ಜಿಲ್ಲಾ ವಕ್ತಾರರಾದ ರವಿಶಂಕರ ಮಿಜಾರು, ಜಗದೀಶ ಶೇಣವ, ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಸುೀರ್ ಶೆಟ್ಟಿ ಕಣ್ಣೂರು, ಖಜಾಂಚಿ ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ