ಕಾಶ್ಮೀರ ಡಿಡಿಸಿ ಚುನಾವಣೆ: ಬಿಜೆಪಿ ಏಕೈಕ ದೊಡ್ಡ ಪಕ್ಷ

ಶ್ರೀನಗರ: 370ನೇ ವಿ ರದ್ದು ಬಳಿಕ ಮೊದಲ ಬಾರಿಗೆ ನಡೆದ ಜಮ್ಮು ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, 75 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜತೆಗೆ 4.87 ಲಕ್ಷ ಮತಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಮತ ಹಂಚಿಕೆ ಹೊಂದಿರುವ ಪಕ್ಷವೂ ಬಿಜೆಪಿಯಾಗಿದೆ.
280 ಕ್ಷೇತ್ರಗಳ ಪೈಕಿ 278 ಕ್ಷೇತ್ರಗಳ ಫಲಿತಾಂಶ ಪ್ರಕಟಿಸಲಾಗಿದ್ದು, ಉತ್ತರ ಕಾಶ್ಮೀರದ ಬಂಡಿಪೊರ ಹಾಗೂ ಕುಪ್ವಾರ ಜಿಲ್ಲೆಗಳ ಫಲಿತಾಂಶವನ್ನು ಮುಂದಿನ ಆದೇಶದ ತನಕ ಮುಂದೂಡಲಾಗಿದೆ.
278 ಕ್ಷೇತ್ರದಲ್ಲಿ ಬಿಜೆಪಿ 75, ಫಾರೂಖ್ ಅಬ್ದುಲ್ಲಾ ನೇತೃತ್ವದ ಪೀಪಲ್ಸ್ ಅಲಯನ್ಸ್ ಆಫ್ ಗುಪ್ಕರ್ ಡೆಕ್ಲರೇಶನ್ (ಪಿಎಜಿಡಿ) ಮೈತ್ರಿಕೂಟ 110, ಕಾಂಗ್ರೆಸ್ 26, ಜಮ್ಮು ಕಾಶ್ಮೀರ ಅಪ್ನಿ ಪಾರ್ಟಿ 12, ಪಿಡಿಎಫ್, ಎನ್‍ಪಿಪಿ ತಲಾ 2 ಹಾಗೂ ಬಿಎಸ್‍ಪಿ 1 ಕ್ಷೇತ್ರದಲ್ಲಿ ಗೆದ್ದಿದೆ. ಜಮ್ಮುವಿನಲ್ಲಿ ಬಿಜೆಪಿ ಪ್ರಾಬಲ್ಯ ಸಾಸಿದರೆ, ಕಾಶ್ಮೀರದಲ್ಲಿ ಗುಪ್ಕರ್ ಮುನ್ನಡೆ ಸಾಸಿದೆ.
ಪಿಎಜಿಡಿ ಪೈಕಿ ಫಾರೂಖ್ ನೇತೃತ್ವದ ನ್ಯಾಷನಲ್ ಕಾನರೆನ್ಸ್‍ಗೆ 67, ಮೆಹಬೂಬ ಮುಫ್ತಿ ನೇತೃತ್ವದ ಪಿಡಿಪಿ 27, ಸಿಪಿಎಂ 5, ಜೆ-ಕೆ ಪೀಪಲ್ಸ್ ಮೂವ್‍ಮೆಂಟ್‍ಗೆ 3 ಕ್ಷೇತ್ರಗಳಲ್ಲಿ ಗೆದ್ದಿದೆ. ಆದರೂ ಕೇವಲ 3.94 ಲಕ್ಷ ಮತಗಳನ್ನು ಮೈತ್ರಿಕೂಟ ಪಡೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ