ರಕ್ಷಣಾ ವಲಯದಲ್ಲೂ ಆತ್ಮನಿರ್ಭರಕ್ಕೆ ಒತ್ತು| ಡಿಆರ್‍ಡಿಒ ಅಭಿವೃದ್ಧಿ ಗಸ್ತು ಸಾಮಥ್ರ್ಯ ಹೆಚ್ಚಿಸುವ 6 ವಿಮಾನ ಸೇನೆಗೆ ಶೀಘ್ರ

ಹೊಸದಿಲ್ಲಿ: ಉಗ್ರ ಪೊಷಣೆ ರಾಷ್ಟ್ರ ಪಾಕಿಸ್ಥಾನ ಹಾಗೂ ಕುತಂತ್ರಿ ರಾಷ್ಟ್ರ ಚೀನಾದೊಂದಿಗೆ ಭಾರತ ಹಂಚಿಕೊಂಡಿರುವ ಗಡಿ ಪ್ರದೇಶಗಳಲ್ಲಿ ವಾಯು ಪಡೆಯ ಗಸ್ತು ಸಾಮಥ್ರ್ಯ ಹೆಚ್ಚಿಸಲು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ನೂತನ 6 ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ (ಎಇಡಬ್ಲೂ -ಸಿ)ವಿಮಾನಗಳನ್ನು ಅಭಿವೃದ್ಧಿಪಡಿಸಲಿದೆ. ಇದರಿಂದ ದೇಶೀಯ ರಕ್ಷಣಾ ವಲಯಕ್ಕೆ ಬಹುದೊಡ್ಡ ಉತ್ತೇಜನ ದೊರೆತಿದ್ದು, ಸೇನೆಯ ಬಲ ದುಪ್ಪಟ್ಟಾಗಲಿದೆ. 

ಬರೋಬ್ಬರಿ 10,500 ಕೋಟಿ ರೂ. ಯೋಜನೆ ಇದಾಗಿದ್ದು, 6 ಏರ್‍ಬೋರ್ನ್ ಅರ್ಲಿ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ (ಎಇಡಬ್ಲೂ -ಸಿ)ವಿಮಾನಗಳನ್ನು ಡಿಆರ್‍ಡಿಒ ದೇಶದಲ್ಲೇ ಅಭಿವೃದ್ಧಿಪಡಿಸಲಿದೆ. ಈ 6 ವಿಮಾನಗಳನ್ನು ಏರ್‍ಇಂಡಿಯಾದಿಂದ ಖರೀದಿಸಿ, ಡಿಆರ್‍ಡಿಒ ಸೇನೆಯ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಲಿದೆ. ಮುಖ್ಯವಾಗಿ 360 ಡಿಗ್ರಿಯಲ್ಲೂ ಗಸ್ತು ನಡೆಸಲು ಸಾಧ್ಯವಾಗುವ ರೆಡಾರ್‍ಗಳನ್ನು ವಿಮಾನಗಳಲ್ಲಿ ಅಳವಡಿಸಲಾಗುತ್ತಿದೆ.
ಸದ್ಯ ಗಸ್ತು ನಡೆಸಲೆಂದೇ ಬಳಸಲಾಗುತ್ತಿರುವ ನೇತ್ರಾ ವಿಮಾನಗಳಿಗಿಂತ ನೂತನ ವಿಮಾನಗಳು ಹೆಚ್ಚಿನ ಸಾಮಥ್ರ್ಯ ಹೊಂದಿರಲಿವೆ. ಸೇನಾ ಕಾರ್ಯಾಚರಣೆ ವೇಳೆ 360 ಡಿಗ್ರಿಯಲ್ಲೂ ವೈರಿ ಪ್ರದೇಶದಲ್ಲಿ ನಿಖರವಾಗಿ ಗಸ್ತು ನಡೆಸಲು ಸಾಧ್ಯವಾಗಲಿದ್ದು, ಶೀಘ್ರವೇ ಕೇಂದ್ರ ಸರ್ಕಾರ ಯೋಜನೆಗೆ ಅನುಮೋದನೆ ನೀಡುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ಹಿಂದೆ ವಾಯು ಪಡೆಯ ಗಸ್ತು ಸಾಮಥ್ರ್ಯ ಹೆಚ್ಚಿಸಲೆಂದು ಯುರೋಪ್ ಮೂಲದ ಸಂಸ್ಥೆಯಿಂದ 6 ಏರ್‍ಬಸ್ 330 ವಿಮಾನಗಳನ್ನು ಖರೀದಿಸಲು ಭಾರತ ಸರ್ಕಾರ ಚಿಂತನೆ ನಡೆಸಿತ್ತು. ಆದರೀಗ ದೇಶದಲ್ಲೇ ಇಂತಹ ತಂತ್ರಜ್ಞಾನವುಳ್ಳ ವಿಮಾನಗಳು ಸಿದ್ಧವಾಗುತ್ತಿರುವ ಹಿನ್ನೆಲೆ, ದೇಶಕ್ಕೆ ಆಮದು ಖರ್ಚು ಉಳಿತಾಯವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ