631 ಕೋಟಿ ಮೌಲ್ಯದ ಆಸ್ತಿಯಿರೋ ಕಾಂಗ್ರೆಸ್ ನಾಯಕ ಸಿಂಗ್ ಅದ್ಯಾವ ಕೆಟಗರಿಯ ` ಬಡ ‘ರೈತ !

ಹೊಸದಿಲ್ಲಿ: ರೈತರ ಪ್ರತಿಭಟನಾ ಕಣದಲ್ಲಿ ಮುಂಚೂಣಿಯಲ್ಲಿದ್ದುಕೊಂಡು, ತಾನು ಬಡ ಸಂತ್ರಸ್ತ ರೈತನೆಂದು ಬಿಂಬಿಸುತ್ತಿರುವ `ರೈತ ನಾಯಕ ' ವಿ.ಎಂ.ಸಿಂಗ್ ವಾಸ್ತವದಲ್ಲಿ ಆಗರ್ಭ ಸಿರಿವಂತ ಕಾಂಗ್ರೆಸ್ ನಾಯಕ. ಈ ` ಬಡ 'ರೈತನ ಬಳಿ 2009ರಲ್ಲೇ ಬರೋಬ್ಬರಿ 631 ಕೋ.ರೂ.ಮೊತ್ತದ ಆಸ್ತಿಯಿತ್ತು ! ಈಗ ಪ್ರಮಾಣ ಮತ್ತಷ್ಟು ಜಾಸ್ತಿಯಾಗಿರೋ ಸಾಧ್ಯತೆಯನ್ನು ಅಲ್ಲಗಳೆಯೋ ಹಾಗಿಲ್ಲ. ಇಷ್ಟು ಮಾತ್ರವಲ್ಲ ಈತ ಕಳ್ಳತನ, ಸುಲಿಗೆ, ದೊಂಬಿ ಇತ್ಯಾದಿಗೆ ಪ್ರಚೋದನೆ ನೀಡಿದ ಆರೋಪವುಳ್ಳ ಪ್ರಕರಣ ಸಹಿತ ಸುಮಾರು 8 ಪ್ರಕರಣಗಳ ಕುಖ್ಯಾತ ಆರೋಪಿಯೂ ಹೌದು.
ಎಂಎಸ್‍ಪಿ ರದ್ದಾಗುವುದಿಲ್ಲ
ಎಂದಿದ್ದಾರೆ ಪ್ರಧಾನಿ ಮೋದಿ
ಖಲಿಸ್ಥಾನವಾದಿಗಳು, ಮಾವೋವಾದಿಗಳು ತೂರಿಕೊಂಡಿರೋ ಸ್ಥಿತಿಯಲ್ಲಿ ದಿಲ್ಲಿಯಲ್ಲಿ ಮುಂದುವರೆದಿರುವ ರೈತರ ಪ್ರತಿಭಟನೆ ನೇತೃತ್ವ ವಹಿಸಿರುವ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿಯ ಮುಖ್ಯಸ್ಥನಾಗಿರುವ ಸರ್ದಾರ್ ವಿ.ಎಂ.ಸಿಂಗ್, ಸೋಮವಾರ ಮುಂದಿಟ್ಟಿರುವ ಬೇಡಿಕೆಯಂತು ಇನ್ನೂ ವಿಚಿತ್ರ. ತಮ್ಮೆಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ(ಎಂಎಸ್‍ಪಿ) ನೀಡೋ ವಿಚಾರದಲ್ಲಿ ಸರಕಾರ ಆಶ್ವಾಸನೆ ನೀಡಬೇಕು. ಎಂಎಸ್‍ಪಿ ಅಡಿಯಲ್ಲೇ ತಮ್ಮೆಲ್ಲಾ ಬೆಳೆಗಳನ್ನು ಖರೀದಿಸುವ ವಿಚಾರದಲ್ಲಿ ನಮಗೆ ಖಾತ್ರಿ ಬೇಕು. ಹಾಗಾಗಿ ಎಂಎಸ್‍ಪಿ ಖಾತರಿ ಮಸೂದೆಯನ್ನು ಸರಕಾರ ಅಂಗೀಕರಿಸಬೇಕು ಎಂದು ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ವಿಪರ್ಯಾಸವೆಂದರೆ, ಪ್ರಧಾನಿ ಮೋದಿಯವರು ಜಾರಿಗೊಳಿಸಿರುವ ಹೊಸ ಕೃಷಿ ಕಾಯಿದೆಗಳಡಿ ಎಂಎಸ್‍ಪಿ ರದ್ದಾಗುವುದಿಲ್ಲ ಎಂಬ ವಿಚಾರ ದೇಶದ ಪ್ರತಿಯೋರ್ವ ಜನಸಾಮಾನ್ಯನಿಗೂ ಸ್ಪಷ್ಟ ಗೊತ್ತು. ಈ ವಿಚಾರದಲ್ಲಿ ರೈತರ ದಿಕ್ಕು ತಪ್ಪಿಸಲಿಕ್ಕಾಗೇ ಕಾಂಗ್ರೆಸ್ ಮತ್ತು ವಾಮವಾದಿಗಳು ಪ್ರಚಾರದಲ್ಲಿ ತೊಡಗಿರುವ ಗಂಭೀರ ಆರೋಪಗಳೇನೇ ಇರಲಿ, ಹೊಸ ಕಾಯಿದೆಗಳಿಂದಾಗಿ ಎಂಎಸ್‍ಪಿ ರದ್ದಾಗುವುದಿಲ್ಲ, ಮಂಡಿ ವ್ಯವಸ್ಥೆಗಳೂ ರದ್ದಾಗುವುದಿಲ್ಲ ಎಂದು ನರೇಂದ್ರ ಮೋದಿ ಸರಕಾರ ಪದೇ ಪದೇ ರೈತಾಪಿ ವರ್ಗಕ್ಕೆ ಭರವಸೆ ನೀಡಿದೆ. ಮೋದಿಯವರು ಇಷ್ಟು ಸ್ಪಷ್ಟ ಆಶ್ವಾಸನೆ ನೀಡಿರುವಾಗ ಎಂಎಸ್‍ಪಿ ಬಗ್ಗೆ ಸರಕಾರ ಇನ್ನೊಂದು ಮಸೂದೆ ಮೂಲಕ ಖಾತ್ರಿ ನೀಡೋ ಪ್ರಮೇಯವೇ ಉದ್ಭವಿಸುವುದಿಲ್ಲ. ಹೀಗಿರುವಾಗ ಈ ವಿಚಾರದಲ್ಲಿ ವಿ.ಎಂ.ಸಿಂಗ್ ಆಗ್ರಹ ರೈತರನ್ನು ಹಾದಿ ತಪ್ಪಿಸೋ ಕುತಂತ್ರವೆಂದು ವಿಶ್ಲೇಷಿಸಲಾಗಿದೆ.
ಸಖತ್ ಸಿರಿವಂತ ರೈತನಾಗಿರುವ ಕಾಂಗ್ರೆಸ್ ನಾಯಕ ವಿ.ಎಂ.ಸಿಂಗ್ 2009ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಪಿಲಿಭಿತ್ ಜಿಲ್ಲೆಯಿಂದ ಸ್ಪರ್ಧಾಳುವಾಗಿದ್ದರು. ನಾಮಪತ್ರದ ಜತೆ ಈತ ಸಲ್ಲಿಸಿದ್ದ ಅಫಿದವಿತ್‍ನಲ್ಲಿದ್ದ ಆಸ್ತಿಯ ವಿವರ ಕಂಡಾಗ, ಈತ ಅದ್ಯಾವ ಕೆಟಗರಿಯಲ್ಲಿ ಬರುವ ಬಡವನೆಂದು ಅನುಮಾನವಾಗುತ್ತದೆ. ಭಾರತದಲ್ಲಿ ಇಷ್ಟೊಂದು ಶ್ರೀಮಂತ ರೈತರಿದ್ದಾರೋ ಎಂದು ದಿಗ್ಭ್ರಮೆಯೂ ಆಗುತ್ತೆ.
ತನ್ನ ಬಳಿ 15ಲಕ್ಷ ನಗದು ಹಣವಿದೆ. 26,50,000ಬ್ಯಾಂಕ್ ಠೇವಣಿಯಿದೆ. 14,00,000ಮೌಲ್ಯದ ಮೂರು ವಾಹನಗಳಿವೆ. ದಿಲ್ಲಿ ಮತ್ತು ಭೋಪಾಲ್‍ನಲ್ಲಿ 206,00,00,000 ಮೌಲ್ಯದ 1.5ಎಕರೆ ಮತ್ತು 100ಎಕರೆ ಕೃಷಿಯೇತರ ಜಾಗವಿದೆ. ಮಧ್ಯಪ್ರದೇಶದ ರೈಸೆನ್‍ನಲ್ಲಿ 36,60,00,000ಕೋಟಿ ಮೌಲ್ಯದ 366ಎಕರೆ ಕೃಷಿ ಭೂಮಿ, ದಿಲ್ಲಿಯಲ್ಲಿ 270ಕೋಟಿ ಮೊತ್ತದ 180ಎಕರೆ, ಭೋಪಾಲದಲ್ಲಿ 108ಕೋಟಿ ಮೌಲ್ಯದ 54ಎಕರೆ ಅಂದರೆ ಒಟ್ಟು 414,60,00,000 ಕೃಷಿ ಭೂಮಿ ಇದೆ. 11ಕೋಟಿ ಮೌಲ್ಯದ ಎರಡು ಮನೆಗಳಿವೆ ಎಂದು ಅಫಿದವಿತ್‍ನಲ್ಲಿ ವಿವರ ನೀಡಿದ್ದರು. ಈತನ ವಿರುದ್ಧದ ಎಂಟು ಕ್ರಿಮಿನಲ್ ಕೇಸ್‍ಗಳ ಪೈಕಿ ಒಂದು ಎಸ್‍ಸಿ-ಎಸ್‍ಟಿ ಕಾಯಿದೆಯಡಿ ದಾಖಲಾದ ಪ್ರಕರಣ.
ಶ್ರೀಮಂತ ಕಾಂಗ್ರೆಸ್ ನಾಯಕ ಸಿಂಗ್ ನಾಟಕ ಹೀಗಿದ್ದರೆ, ಅತ್ತ ಈತನ ಕಾಂಗ್ರೆಸ್ ಪಕ್ಷ ಕೂಡ ಪ್ರಧಾನಿ ನರೇಂದ್ರ ಮೋದಿ ಸರಕಾರವನ್ನು ಹೇಗಾದರೂ ಧರ್ಮಸಂಕಟಕ್ಕೆ ಸಿಲುಕಿಸಬೇಕೆಂಬ ತಂತ್ರದೊಂದಿಗೆ ಈ `ರೈತ ಪ್ರತಿಭಟನೆ'ಯನ್ನು ಬಳಸಿಕೊಳ್ಳಲು ಶತಾಯಗತಾಯ ಯತ್ನದಲ್ಲಿ ತೊಡಗಿದೆ.
ಹೊಸ ಕೃಷಿ ಕಾಯಿದೆಗಳಿಂದ ಮಂಡಿಗಳು ರದ್ದಾಗುತ್ತವೆ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ರದ್ದಾಗುತ್ತದೆ. ರೈತರಿಗೆ ತಮ್ಮ ಉತ್ಪನ್ನಗಳನ್ನು ನ್ಯಾಯಬೆಲೆಗೆ ಮಾರಾಟ ಮಾಡುವ ಹಕ್ಕು ಕೂಡ ಇರುವುದಿಲ್ಲ , ರೈತರು ಕಾರ್ರೇಪೊಟ್‍ಗಳ ಶೋಷಣೆಗೆ ಈಡಾಗುವರು, ಮಂಡಿಗಳ ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗುವರು, ರೈತರ ಸಾಲದ ಹೊರೆ ಮತ್ತಷ್ಟು ದುಪ್ಪಟ್ಟಾಗುವುದು ಎಂದೆಲ್ಲ ಪ್ರಚಾರ ನಿರತವಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ರಾಜ್ಯ ಬಿಜೆಪಿ ಸರಕಾರವನ್ನು ಅಲ್ಲಾಡಿಸಲು ಕಾಂಗ್ರೆಸ್‍ಗೆ ಯಾವುದೇ ಅಸ್ತ್ರ ಸಿಕ್ಕಿಲ್ಲ. ಹಾಗಾಗಿ ಇದೀಗ ರೈತರ ಮುಖವಾಡ ಹಾಕಿಕೊಂಡು , ರೈತರ ಪ್ರತಿಭಟನೆಯಲ್ಲಿ ಸೇರಿಕೊಂಡು ಅಪನಂಬಿಕೆ, ಅರಾಜಕತೆ ಸೃಷ್ಟಿಯಲ್ಲಿ ಕಾಂಗ್ರೆಸ್ ತೊಡಗಿದೆ ಎಂಬುದಾಗಿ ಬಿಜೆಪಿ ಆರೋಪಿಸುತ್ತಿರುವುದಕ್ಕೆ ಇಂತಹ ಅನೇಕ ಪುಷ್ಟಿಗಳು ಲಭಿಸುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ