ಪತ್ನಿ ವೃತ್ತಿ ಜೀವನಕ್ಕಾಗಿ, 112 ದಶಲಕ್ಷ ಡಾಲರ್ ತ್ಯಜಿಸಿದ ಪತಿ

ಬರ್ಲಿನ್: ಸಾಮಾನ್ಯವಾಗಿ ಮದುವೆಯಾದ ನಂತರ ಮಹಿಳೆಯರೇ ಕೆಲಸ ಬಿಟ್ಟು ಕುಟುಂಬ ನೋಡಿಕೊಳ್ಳುವ ರೂಢಿಯಿದೆ. ಪತಿಯ ವೃತ್ತಿ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಡದಿ ವೃತ್ತಿಯಲ್ಲಿ ಮುಂದುವರಿಯಲಿ ಎಂದು ನಿವೃತ್ತಿ ಹೊಂದುತ್ತಿದ್ದಾರೆ. ತಮ್ಮ ಪತ್ನಿ ವೃತ್ತಿ ಜೀವನ ರೂಪಿಸಿಕೊಳ್ಳಲಿ ಎಂದು 112 ದಶಲಕ್ಷ ಡಾಲರ್ ಲಾಭವನ್ನೂ ಕೈಬಿಟ್ಟು, ನಿವೃತ್ತಿ ಹೊಂದಲು ಜರ್ಮನಿ ಮೂಲದ ಜಲಾಂಡೋ ಎಂಬ ಇ ಕಾಮರ್ಸ್ ಆ್ಯಪ್‍ನ ಸಿಇಒ ರುಬಿನ್ ರಿಟ್ಟರ್ ಮುಂದಾಗಿದ್ದಾರೆ.
38 ವರ್ಷದ ರುಬಿನ್ ಮುಂದಿನ 12 ತಿಂಗಳಲ್ಲಿ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ನಾನು ನನ್ನ ಕುಟುಂಬಕ್ಕಾಗಿ ಹೆಚ್ಚಿನ ಸಮಯ ಮೀಸಲಿಡಲು ನಿರ್ಧರಿಸಿದ್ದೇನೆ. ಮುಂಬರುವ ವರ್ಷಗಳಲ್ಲಿ ಪತ್ನಿಯ ವೃತ್ತಿ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಲು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ರುಬಿನ್ ತಿಳಿಸಿದ್ದಾರೆ. ರುಬಿನ್ ಪತ್ನಿ ಜರ್ಮನಿ ಕೋರ್ಟ್ ನ್ಯಾಯಾೀಶೆಯಾಗಿದ್ದಾರೆ.
ರುಬಿನ್‍ರನ್ನು ಸಂಸ್ಥೆ ಐದು – ವರ್ಷದ ವಿಶೇಷ ಒಪ್ಪಂದ ಅನ್ವಯ ಸಿಇಒ ಆಗಿ ನೇಮಿಸಿತ್ತು. ಜತೆಗೆ ಯಶಸ್ವಿಯಾಗಿ ಐದು ವರ್ಷ ಸಿಇಒ ಆಗಿ ಮುಂದುವರಿದಿದ್ದರೆ, 112 ದಶಲಕ್ಷ ಡಾಲರ್ ಬೋನಸ್ ಸಿಗುತಿತ್ತು. ಆದರೆ ಮಧ್ಯದಲ್ಲೇ ನಿವೃತ್ತಿ ಹೊಂದುವ ಕಾರಣ, ರುಬಿನ್ ಬೋನಸ್ ಕಳೆದುಕೊಳ್ಳುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ