ಬಿಜೆಪಿ ಮುಖಂಡರ ವಾಹನಗಳ ಮೇಲೆ ಟಿಎಂಸಿ ಕಾರ್ಯಕರ್ತರ ಕಲ್ಲು ತೂರಾಟ ಪ. ಬಂಗಾಳದಲ್ಲಿ ಗೂಂಡಾ ವರ್ತನೆ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ಟಿಎಂಸಿ ಗೂಂಡಾ ವರ್ತನೆ ಮುಂದುವರಿದಿದೆ. ಸಭೆಯೊಂದಕ್ಕೆ ತೆರಳುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬೆಂಗಾವಲು ಮತ್ತು ಬಿಜೆಪಿ ನಾಯಕರ ವಾಹನಗಳ ಮೇಲೆ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ, ಗೂಂಡಾ ವರ್ತನೆ ಮೆರೆದಿದ್ದಾರೆ.
ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬೋರ್‍ನಲ್ಲಿ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲಿನ ಮೇಲೆ ನಡೆದಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ದಕ್ಷಿಣ 24 ಪರಗಣದಲ್ಲಿ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಸಭೆಗೆ ಭಾಗವಹಿಸಲು ತೆರಳುತ್ತಿದ್ದ ಜೆ.ಪಿ. ನಡ್ಡಾ ಅವರ ಬೆಂಗಾವಲು ವಾಹನ ಸೇರಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ, ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಮುಖಂಡ ಸಂಬೀತ್ ಪಾತ್ರ ಅವರ ವಾಹನಗಳ ಮೇಲೆ ತೃಣಮೂಲ ಕಾಂಗ್ರೆಸ್(ಟಿಎಂಸಿ)ನ ಕಾರ್ಯಕರ್ತರು ಕಲ್ಲು, ಇಟ್ಟಿಗೆ ತೂರಿ ದಾಳಿ ನಡೆಸಿದ್ದಾರೆ. ಈ ವೇಳೆ ವಿಜಯವರ್ಗೀಯ ಹಾಗೂ ಪಕ್ಷದ ಮುಖಂಡ ಮುಕುಲ್ ರಾಯ್ ಗಾಯಗೊಂಡಿದ್ದಾರೆ.  ಇಲ್ಲಿಯವರೆಗೆ ಬಂಗಾಳ ತನ್ನ ವಿಶಿಷ್ಟ ಸಂಸ್ಕತಿಗೆ ಹೆಸರಾಗಿತ್ತು. ಆದರೆ, ಮಮತಾ ಬ್ಯಾನರ್ಜಿ ಅದನ್ನೆಲ್ಲ ಹಾಳುಗೆಡವಿದ್ದಾರೆ ಎಂದ ಜೆ.ಪಿ. ನಡ್ಡಾ, ರಾಜ್ಯದಲ್ಲಿ ಆಡಳಿತ ಹದಗೆಟ್ಟಿದೆ. ಕೇಂದ್ರ ಪಡೆಗಳಿಲ್ಲದೆ ಬಂಗಾಳದಲ್ಲಿ ಸಂಚರಿಸಲು ಸಾಧ್ಯವಿಲ್ಲ . ಇಲ್ಲಿ ಸಾಮಾನ್ಯ ಜನರೂ ಭೀತರಾಗಿರುವುದನ್ನು ಕಂಡಿದ್ದೇನೆ. ಈಗಾಗಲೇ ಬಂಗಾಳದಲ್ಲಿ ಪರಿವರ್ತನೆಯ ಪಥ ಆರಂಭವಾಗಿದ್ದು , ಮಮತಾ ಬ್ಯಾನರ್ಜಿ ಅವರಿಂದ ಜನತೆ ದೂರ ಸರಿಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ಟಿಎಂಸಿ ಗೂಂಡಾ ವರ್ತನೆ ಮುಂದುವರಿದಿದೆ. ಸಭೆಯೊಂದಕ್ಕೆ ತೆರಳುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬೆಂಗಾವಲು ಮತ್ತು ಬಿಜೆಪಿ ನಾಯಕರ ವಾಹನಗಳ ಮೇಲೆ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ, ಗೂಂಡಾ ವರ್ತನೆ ಮೆರೆದಿದ್ದಾರೆ.
ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬೋರ್‍ನಲ್ಲಿ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲಿನ ಮೇಲೆ ನಡೆದಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ದಕ್ಷಿಣ 24 ಪರಗಣದಲ್ಲಿ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಸಭೆಗೆ ಭಾಗವಹಿಸಲು ತೆರಳುತ್ತಿದ್ದ ಜೆ.ಪಿ. ನಡ್ಡಾ ಅವರ ಬೆಂಗಾವಲು ವಾಹನ ಸೇರಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ, ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಮುಖಂಡ ಸಂಬೀತ್ ಪಾತ್ರ ಅವರ ವಾಹನಗಳ ಮೇಲೆ ತೃಣಮೂಲ ಕಾಂಗ್ರೆಸ್(ಟಿಎಂಸಿ)ನ ಕಾರ್ಯಕರ್ತರು ಕಲ್ಲು, ಇಟ್ಟಿಗೆ ತೂರಿ ದಾಳಿ ನಡೆಸಿದ್ದಾರೆ. ಈ ವೇಳೆ ವಿಜಯವರ್ಗೀಯ ಹಾಗೂ ಪಕ್ಷದ ಮುಖಂಡ ಮುಕುಲ್ ರಾಯ್ ಗಾಯಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ