ಹೂಡಿಕೆ ಹೆಸರಲ್ಲಿ ಪ್ರಾಬಲ್ಯ ಸಾಸುವ ಸಂಚು ಎಂದು ಸೂಚನೆ ನೀಡಿದ್ದ ಭಾರತ ಶ್ರೀಲಂಕಾ ಬಂದರು ಹತ್ತಿರ ಚೀನಾ ಕಾರ್ಖಾನೆ

ಕೊಲೊಂಬೊ: ನೂತನ ಮೂಲಸೌಕರ್ಯ ಯೋಜನೆಗಳ ಹೆಸರಿನಲ್ಲಿ ಶ್ರೀಲಂಕಾ ಮೇಲೆ ಚೀನಾ ಹಿಡಿತ ಸಾಸಲು ಯತ್ನಿಸುತ್ತಿದೆ ಎಂದು ಭಾರತ ಮುನ್ಸೂಚನೆ ನೀಡಿದ್ದ ಬೆನ್ನಲ್ಲೇ, ಶ್ರೀಲಂಕಾ ಪ್ರಮುಖ ಬಂದರಿನ ಹತ್ತಿರ ಚೀನಾ 300 ಕೋಟಿ ರೂ. ವೆಚ್ಚದ ಟೈರ್ ಕಾರ್ಖಾನೆ ಸ್ಥಾಪಿಸಿದೆ .
ದೇಶದ ಉತ್ಪಾದನಾ ವಲಯದಲ್ಲಿ ಚೀನಾ ಬೃಹತ್ ಮೊತ್ತದ ಹೂಡಿಕೆ ಮಾಡಿದ್ದು, ಕಾರ್ಯತಾಂತ್ರಿಕ ಬಂದರಿನ ಬಳಿ ಕಾರ್ಖಾನೆ ಆರಂಭಿಸಿದೆ ಎಂದು ಶ್ರೀಲಂಕಾ ಘೋಷಿಸಿದೆ.
ಈಗಾಗಲೇ ಚೀನಾ ತನ್ನ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅನ್ವಯ ಶ್ರೀಲಂಕಾದಲ್ಲಿ ಸಾಕಷ್ಟು ಹೂಡಿಕೆಮಾಡಿದೆ. ಈ ಮೂಲಕ ಶ್ರೀಲಂಕಾ ಮೇಲೆ ಆರ್ಥಿಕವಾಗಿ ತನ್ನ ಪ್ರಾಬಲ್ಯ ಸಾಸಲು ಸಂಚು ರೂಪಿಸಿದೆ ಎಂದು ಭಾರತ ಸೇರಿ ಅನೇಕ ಪಾಶ್ಚಾತ್ಯ ರಾಷ್ಟ್ರಗಳು ಎಚ್ಚರಿಕೆ ನೀಡಿವೆ.
ಹಂಬನ್‍ಟೋಟ ಬಂದರಿನ ಬಳಿ ಕಾರ್ಖಾನೆಯಿದ್ದು, ಚೀನಾದಿಂದ ಪಡೆದ 1.4 ಶತಕೋಟಿ ಡಾಲರ್ ಸಾಲವನ್ನು ಹಿಂದಿರುಗಿಸಲು ಶ್ರೀಲಂಕಾ ವಿಫಲವಾದ ಹಿನ್ನೆಲೆ, 2017ರಲ್ಲಿ ಕಾರ್ಖಾನೆಯನ್ನು ಚೀನಾ ಮೂಲದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು.ಇನ್ನು ಬಂದರಿನ ಪಕ್ಕದಲ್ಲೇ ಟೈರ್ ಉತ್ಪಾದನಾ ಕಾರ್ಖಾನೆ ಆರಂಭಿಸಿಸಲು ಚೀನಾಗೆ ಶ್ರೀಲಂಕಾ ಸಂಪುಟ ಸಹ ಒಪ್ಪಿಗೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ