ರಾಜಸ್ತಾನ ಪಂ.ಚುನಾವಣೆ:ಬಿಜೆಪಿಗೆ ಗೆಲುವು, ಆಳುವ ಕಾಂಗ್ರೆಸ್‍ಗೆ ಹಿನ್ನಡೆ

ಜೈಪುರ:ರಾಜಸ್ತಾನದಲ್ಲಿ ನ.23,27,ಡಿ.1 ಮತ್ತು 5ರಂದು ನಾಲ್ಕು ಹಂತಗಳಲ್ಲಿ ನಡೆದ ಪಂಚಾಯತ್ ಸಮಿತಿ , ಜಿಲ್ಲಾ ಪರಿಷತ್ ಚುನಾವಣೆಗಳಲ್ಲಿ ಪ್ರತಿಪಕ್ಷ ಬಿಜೆಪಿ ಜಯಭೇರಿ ಬಾರಿಸಿದ್ದು, ಆಳುವ ಕಾಂಗ್ರೆಸಿಗೆ ಭಾರೀ ಆಘಾತ ನೀಡಿದೆ.ಈ ಫಲಿತಾಂಶದ ಬಳಿಕ ಕೆಲವೆಡೆ ಹಿಂಸಾಚಾರ ಉಂಟಾಗಿದ್ದು, ಒಬ್ಬ ವ್ಯಕ್ತಿ ಬಲಿಯಾದ ಘಟನೆ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.ಕಾಂಗ್ರೆಸಿನ ಭದ್ರಕೋಟೆಗಳಲ್ಲೂ ಬಿಜೆಪಿ ಗೆಲುವು ಸಾಸಿರುವುದು ಕಾಂಗ್ರೆಸಿಗೆ ತೀವ್ರ ಆತಂಕವನ್ನುಂಟು ಮಾಡಿದೆ.
222ಪಂಚಾಯತ್ ಸಮಿತಿಗಳಲ್ಲಿನ ಒಟ್ಟು 4,371ಸ್ಥಾನಗಳ ಪೈಕಿ 4050ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ 1,989ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಸಿದೆ.ಆಳುವ ಕಾಂಗ್ರೆಸ್ 1,852ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ಹಾಗೆಯೇ 636ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ 580ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 353ಸ್ಥಾನಗಳೊಂದಿಗೆ ಭರ್ಜರಿ ಜಯ ದಾಖಲಿಸಿದೆ. ಕಾಂಗ್ರೆಸ್ 252ಸ್ಥಾನಗಳಲ್ಲಿ ಮಾತ್ರವೇ ಗೆಲುವು ಕಂಡಿದೆ.ಈ ವರೆಗೆ 21ಜಿಲ್ಲಾಪರಿಷತ್‍ಗಳಲ್ಲಿ ಬಿಜೆಪಿ 14ರಲ್ಲಿ ಅಕಾರಕ್ಕೆ ಬಂದಿದ್ದರೆ, ಕಾಂಗ್ರೆಸ್ 5ರಲ್ಲಿ ಮಾತ್ರ ಅಕಾರ ಉಳಿಸಿಕೊಂಡಿದೆ.222ಪಂ.ಸಮಿತಿಗಳ ಪೈಕಿ 93ರಲ್ಲಿ ಬಿಜೆಪಿ ಅಕಾರಕ್ಕೆ ಬಂದಿದೆ ಎಂದು ವರದಿಗಳು ತಿಳಿಸಿವೆ.
ಗ್ರಾಮೀಣ ಭಾಗಗಳಲ್ಲೂ ಬಿಜೆಪಿಗೆ ಗೆಲುವು
ತಾನು ರಾಜಸ್ತಾನದ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಬೆಂಬಲ ಹೊಂದಿರುವುದಾಗಿ ಕಾಂಗ್ರೆಸ್ ಹೇಳಿಕೊಂಡಿತ್ತಾದರೂ , ಅಲ್ಲೂ ಬಿಜೆಪಿಗೆ ವ್ಯಾಪಕ ಗೆಲುವು ಲಭಿಸಿದ್ದು, ಕಾಂಗ್ರೆಸಿಗೆ ಮುಖಭಂಗವುಂಟಾಗಿದೆ.ಪಂಚಾಯತ್ ಸಮಿತಿಯ 422ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದರೆ, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ 56ಮಂದಿ , ಸಿಪಿಎಂನ 16ಮಂದಿ ಗೆದ್ದಿದ್ದಾರೆ.
ಬಿಜೆಪಿ ಜಯಭೇರಿ ಬಾರಿಸಿದ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.ಗೆಲುವಿಗಾಗಿ ಕಾರ್ಯಕರ್ತರನ್ನು ಮತ್ತು ಬಿಜೆಪಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿ ಕಾಂಗ್ರೆಸಿನ ಸುಳ್ಳು ಘೋಷಣೆಗಳನ್ನು ತಿರಸ್ಕರಿಸಿದ್ದಕ್ಕಾಗಿ ರಾಜ್ಯದ ಜನತೆಯನ್ನು ಅಭಿನಂದಿಸಿದ್ದಾರೆ.ಈ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತನ್ನ ಪ್ರಭಾವವನ್ನು ಪ್ರದರ್ಶಿಸಿರುವುದು ಗಮನ ಸೆಳೆದಿದೆ.ಒಟ್ಟು 1,778(ಜಿ.ಪ.)ಮತ್ತು 12,663(ಪಂ.ಸಮಿತಿ)ಮಂದಿ ಕಣದಲ್ಲಿದ್ದರು.
ಕಾಂಗ್ರೆಸ್ ಸೇರಿ ವಿಪಕ್ಷದ ಸುಳ್ಳು
ಪ್ರಚಾರಕ್ಕೆ ಜನತೆಯ ತಿರಸ್ಕಾರ
ರಾಜಸ್ತಾನ ಪಂಚಾಯತ್ ರಾಜ್ ಚುನಾವಣೆಗಳಲ್ಲೂ ಬಿಜೆಪಿ ಭಾರೀ ಗೆಲುವು ಸಾಸಿ ಆಳುವ ಕಾಂಗ್ರೆಸಿಗೆ ತೀವ್ರ ಹಿನ್ನಡೆಯುಂಟುಮಾಡಿರುವುದು ದೇಶದ ಜನತೆ ಕಾಂಗ್ರೆಸ್ ಮತ್ತಿತರ ವಿಪಕ್ಷಗಳ ಋಣಾತ್ಮಕ ರಾಜಕೀಯವನ್ನು ತಿರಸ್ಕರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಕೃಷಿ ಮಸೂದೆ ಸೇರಿದಂತೆ ಕೇಂದ್ರದ ಎಲ್ಲ ಜನಪರ ನೀತಿಗಳನ್ನು ತಿರುಚಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸನ್ನು ದೇಶದ ಜನತೆ ತಿರಸ್ಕರಿಸುತ್ತಿದೆ. ಪ್ರಧಾನಿ ಮೋದಿಯವರ ಅಭಿವೃದ್ಧಿ ಪರ ನೀತಿಗಳಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತಿದೆ ಎಂಬುದಕ್ಕೆ ರಾಜಸ್ತಾನದ ಈ ಚುನಾವಣೆ ಸಾಕ್ಷಿ ಎಂಬುದಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರತಿಕ್ರಿಯಿಸಿ,ರಾಜಸ್ತಾನ ಜನತೆಯನ್ನು ಅಭಿನಂದಿಸಿದ್ದಾರೆ.ಜೈಪುರ:ರಾಜಸ್ತಾನದಲ್ಲಿ ನ.23,27,ಡಿ.1 ಮತ್ತು 5ರಂದು ನಾಲ್ಕು ಹಂತಗಳಲ್ಲಿ ನಡೆದ ಪಂಚಾಯತ್ ಸಮಿತಿ , ಜಿಲ್ಲಾ ಪರಿಷತ್ ಚುನಾವಣೆಗಳಲ್ಲಿ ಪ್ರತಿಪಕ್ಷ ಬಿಜೆಪಿ ಜಯಭೇರಿ ಬಾರಿಸಿದ್ದು, ಆಳುವ ಕಾಂಗ್ರೆಸಿಗೆ ಭಾರೀ ಆಘಾತ ನೀಡಿದೆ.ಈ ಫಲಿತಾಂಶದ ಬಳಿಕ ಕೆಲವೆಡೆ ಹಿಂಸಾಚಾರ ಉಂಟಾಗಿದ್ದು, ಒಬ್ಬ ವ್ಯಕ್ತಿ ಬಲಿಯಾದ ಘಟನೆ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.ಕಾಂಗ್ರೆಸಿನ ಭದ್ರಕೋಟೆಗಳಲ್ಲೂ ಬಿಜೆಪಿ ಗೆಲುವು ಸಾಸಿರುವುದು ಕಾಂಗ್ರೆಸಿಗೆ ತೀವ್ರ ಆತಂಕವನ್ನುಂಟು ಮಾಡಿದೆ.
222ಪಂಚಾಯತ್ ಸಮಿತಿಗಳಲ್ಲಿನ ಒಟ್ಟು 4,371ಸ್ಥಾನಗಳ ಪೈಕಿ 4050ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ 1,989ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಸಿದೆ.ಆಳುವ ಕಾಂಗ್ರೆಸ್ 1,852ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ಹಾಗೆಯೇ 636ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ 580ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 353ಸ್ಥಾನಗಳೊಂದಿಗೆ ಭರ್ಜರಿ ಜಯ ದಾಖಲಿಸಿದೆ. ಕಾಂಗ್ರೆಸ್ 252ಸ್ಥಾನಗಳಲ್ಲಿ ಮಾತ್ರವೇ ಗೆಲುವು ಕಂಡಿದೆ.ಈ ವರೆಗೆ 21ಜಿಲ್ಲಾಪರಿಷತ್‍ಗಳಲ್ಲಿ ಬಿಜೆಪಿ 14ರಲ್ಲಿ ಅಕಾರಕ್ಕೆ ಬಂದಿದ್ದರೆ, ಕಾಂಗ್ರೆಸ್ 5ರಲ್ಲಿ ಮಾತ್ರ ಅಕಾರ ಉಳಿಸಿಕೊಂಡಿದೆ.222ಪಂ.ಸಮಿತಿಗಳ ಪೈಕಿ 93ರಲ್ಲಿ ಬಿಜೆಪಿ ಅಕಾರಕ್ಕೆ ಬಂದಿದೆ ಎಂದು ವರದಿಗಳು ತಿಳಿಸಿವೆ.
ಗ್ರಾಮೀಣ ಭಾಗಗಳಲ್ಲೂ ಬಿಜೆಪಿಗೆ ಗೆಲುವು
ತಾನು ರಾಜಸ್ತಾನದ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಬೆಂಬಲ ಹೊಂದಿರುವುದಾಗಿ ಕಾಂಗ್ರೆಸ್ ಹೇಳಿಕೊಂಡಿತ್ತಾದರೂ , ಅಲ್ಲೂ ಬಿಜೆಪಿಗೆ ವ್ಯಾಪಕ ಗೆಲುವು ಲಭಿಸಿದ್ದು, ಕಾಂಗ್ರೆಸಿಗೆ ಮುಖಭಂಗವುಂಟಾಗಿದೆ.ಪಂಚಾಯತ್ ಸಮಿತಿಯ 422ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದರೆ, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ 56ಮಂದಿ , ಸಿಪಿಎಂನ 16ಮಂದಿ ಗೆದ್ದಿದ್ದಾರೆ.
ಬಿಜೆಪಿ ಜಯಭೇರಿ ಬಾರಿಸಿದ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.ಗೆಲುವಿಗಾಗಿ ಕಾರ್ಯಕರ್ತರನ್ನು ಮತ್ತು ಬಿಜೆಪಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿ ಕಾಂಗ್ರೆಸಿನ ಸುಳ್ಳು ಘೋಷಣೆಗಳನ್ನು ತಿರಸ್ಕರಿಸಿದ್ದಕ್ಕಾಗಿ ರಾಜ್ಯದ ಜನತೆಯನ್ನು ಅಭಿನಂದಿಸಿದ್ದಾರೆ.ಈ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತನ್ನ ಪ್ರಭಾವವನ್ನು ಪ್ರದರ್ಶಿಸಿರುವುದು ಗಮನ ಸೆಳೆದಿದೆ.ಒಟ್ಟು 1,778(ಜಿ.ಪ.)ಮತ್ತು 12,663(ಪಂ.ಸಮಿತಿ)ಮಂದಿ ಕಣದಲ್ಲಿದ್ದರು.
ಕಾಂಗ್ರೆಸ್ ಸೇರಿ ವಿಪಕ್ಷದ ಸುಳ್ಳು
ಪ್ರಚಾರಕ್ಕೆ ಜನತೆಯ ತಿರಸ್ಕಾರ
ರಾಜಸ್ತಾನ ಪಂಚಾಯತ್ ರಾಜ್ ಚುನಾವಣೆಗಳಲ್ಲೂ ಬಿಜೆಪಿ ಭಾರೀ ಗೆಲುವು ಸಾಸಿ ಆಳುವ ಕಾಂಗ್ರೆಸಿಗೆ ತೀವ್ರ ಹಿನ್ನಡೆಯುಂಟುಮಾಡಿರುವುದು ದೇಶದ ಜನತೆ ಕಾಂಗ್ರೆಸ್ ಮತ್ತಿತರ ವಿಪಕ್ಷಗಳ ಋಣಾತ್ಮಕ ರಾಜಕೀಯವನ್ನು ತಿರಸ್ಕರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಕೃಷಿ ಮಸೂದೆ ಸೇರಿದಂತೆ ಕೇಂದ್ರದ ಎಲ್ಲ ಜನಪರ ನೀತಿಗಳನ್ನು ತಿರುಚಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸನ್ನು ದೇಶದ ಜನತೆ ತಿರಸ್ಕರಿಸುತ್ತಿದೆ. ಪ್ರಧಾನಿ ಮೋದಿಯವರ ಅಭಿವೃದ್ಧಿ ಪರ ನೀತಿಗಳಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತಿದೆ ಎಂಬುದಕ್ಕೆ ರಾಜಸ್ತಾನದ ಈ ಚುನಾವಣೆ ಸಾಕ್ಷಿ ಎಂಬುದಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರತಿಕ್ರಿಯಿಸಿ,ರಾಜಸ್ತಾನ ಜನತೆಯನ್ನು ಅಭಿನಂದಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ