ಪಂಜಾಬ್ ರೈತರ 6ನೇ ಬೇಡಿಕೆ ಗೊತ್ತೇ?

ಹೊಸದಿಲ್ಲಿ:ರೈತ ಪ್ರತಿಭಟನೆಯಲ್ಲಿ ಖಲಿಸ್ತಾನಿ ಉಗ್ರರು ನುಸುಳಿದ್ದಾರೆ ಎಂಬ ವರದಿಯಿಂದ ಪೇಚಿಗೆ ಸಿಲುಕಿರುವ ಪಂಜಾಬ್ ರೈತ ಗುಂಪುಗಳು , ಪ್ರತಿಭಟನೆಯಲ್ಲಿ ತಾವು ಕರೆದೊಯ್ದಿರುವ ವೃದ್ಧರು, ಮಹಿಳೆಯರಿಂದ ಇದಕ್ಕೆ ವಿರುದ್ಧವಾಗಿ ಭಾವನಾತ್ಮಕ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಮತ್ತು ಈ ಹೇಳಿಕೆಗಳನ್ನು `ದಿಲ್ಲಿ ಮಾಧ್ಯಮ’ಜಾಲದ ಮೂಲಕ ದೇಶದಲ್ಲಿ ಪ್ರಸಾರವಾಗುವಂತೆ ಮಾಡಲಾಗುತ್ತಿದೆ.ಆದರೆ ಇಷ್ಟಕ್ಕೂ ಈ ಪಂಜಾಬ್ ರೈತರ ಬೇಡಿಕೆಯ ಆರನೇ ಅಂಶ ತುಂಬ ಗಮನ ಸೆಳೆಯುತ್ತಿದೆ.ಅದೆಂದರೆ ಬುದ್ಧಿಜೀವಿಗಳು, ಮಾನವಹಕ್ಕು ಗುಂಪುಗಳ ವಿರುದ್ಧದ ಕೇಸು ಹಿಂಪಡೆಯಬೇಕು ಎಂಬುದಾಗಿದೆ !ಈ ಬುದ್ಧಿಜೀವಿಗಳಿಗೂ ರೈತರಿಗೂ ಎಲ್ಲಿಂದೆಲ್ಲಿಯ ಸಂಬಂಧ?
ನಮ್ಮ ಪ್ರತಿಭಟನೆಯಲ್ಲಿ ಖಲಿಸ್ತಾನಿ ಉಗ್ರರು ನುಸುಳಿಕೊಂಡಿದ್ದಾರೆ ಎಂದು ಸರಕಾರ ಆರೋಪಿಸುತ್ತಿದೆ. ಆದರೆ ನಾವು ದೇಶಕ್ಕಾಗಿ ಗುಂಡು ಸ್ವೀಕರಿಸಿಯೇವು. ಆದರೆ ಖಲಿಸ್ತಾನವನ್ನಲ್ಲ ಎಂದು ಒಬ್ಬ ವಯೋವೃದ್ಧ ಹೇಳಿರುವುದನ್ನು ಪ್ರಮುಖ ಆಂಗ್ಲ ಪತ್ರಿಕೆಯೊಂದು ಪ್ರಸಾರ ಮಾಡುತ್ತಿದೆ. ಆದರೆ ಈ ಪ್ರತಿಭಟನೆಯಲ್ಲಿ ಖಲಿಸ್ತಾನಿ ಉಗ್ರರು ಪಾಲ್ಗೊಂಡಿಲ್ಲ ಎಂಬುದನ್ನು ಒಬ್ಬ ವಯೋವೃದ್ಧ ರೈತ ಯಾಕೆ ಪ್ರತಿಪಾದಿಸುತ್ತಿದ್ದಾರೆ ಮತ್ತು ಹೇಗೆ ಪ್ರತಿಪಾದಿಸುತ್ತಿದ್ದಾರೆ?ಯಾಕೆಂದರೆ ಈ ರೈತರಿಗೆ ಈ ಚಳವಳಿ ಮತ್ತು ಅದರಲ್ಲಿ ಪಾಲ್ಗೊಂಡವರ ಸಮಗ್ರ ಮಾಹಿತಿಯೇನೂ ಇಲ್ಲ ಎಂಬುದನ್ನು ಈ ಪತ್ರಿಕೆ ಜಾಣತನದಿಂದ ಮರೆಮಾಚುತ್ತಿದೆ !
ಹಾಗೆಯೇ ಈ ಪಂಜಾಬಿ ರೈತ ಗುಂಪುಗಳ ಆರು ಬೇಡಿಕೆಗಳ ಪಟ್ಟಿಯಲ್ಲಿ ರೈತ ಪ್ರತಿಭಟನೆಗೆ ಸಂಬಂಧವೇ ಇಲ್ಲದ, ದೇಶಾದ್ಯಂತ ವಕೀಲರ, ಬುದ್ಧಿಜೀವಿಗಳ , ಬರಹಗಾರರ, ಮಾನವ ಹಕ್ಕು ಹೋರಾಟಗಾರರ ಮೇಲಿನ ಕೇಸುಗಳನ್ನು ಹಿಂಪಡೆಯಬೇಕು ಎಂದು ಇರುವುದು ತುಂಬ ಕುತೂಹಲಕಾರಿಯಾಗಿದೆ.ಈ ಅಂಶವನ್ನು ಈ ಬೇಡಿಕೆ ಪಟ್ಟಿಯಲ್ಲಿ ಸೇರಿಸಲು ಪ್ರಚೋದನೆ ಏನು?ಈ ಹಿಂದೆಂದೂ ರೈತ ಪ್ರತಿಭಟನೆಯಲ್ಲಿ ಇಂತಹ ಬೇಡಿಕೆ ಕಂಡುಬಂದುದಿಲ್ಲ.ಹೀಗಿರುವಾಗ ಈ ಬೇಡಿಕೆಯನ್ನು ಯಾಕೆ ಸೇರಿಸಲಾಗಿದೆ ಮತ್ತು ಇದರ ಹಿಂದೆ ಯಾರಿದ್ದಾರೆ ಎಂಬುದು ಈಗ ಚರ್ಚೆಗೆ ಕಾರಣವಾಗಿದೆ.ವಿಚ್ಛಿದ್ರಕಾರಿ ಶಕ್ತಿಗಳು ಈ ರೈತ ಹೆಸರಿನ ಪ್ರತಿಭಟನೆಯಲ್ಲಿ ಸೇರಿಕೊಂಡಿರುವುದಕ್ಕೆ ಇದು ಇನ್ನಷ್ಟು ಸಾಕ್ಷಿ ಒದಗಿಸಿದೆ.
ಅಲ್ಲದೆ ಬ್ರಿಟನ್ , ಕೆನಡಾಗಳಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುಂಪುಗಳು ಭಾರತೀಯ ರಾಜತಾಂತ್ರಿಕ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವುದು ಕೂಡಾ ಗಮನ ಸೆಳೆದಿದೆ. ಈಗಾಗಲೇ ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ ಕೆಲವು ತೀವ್ರವಾದಿ ಶಕ್ತಿಗಳು ಈ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿವೆ.
ಕೇಂದ್ರ ಸರಕಾರದ ಕೃಷಿ ಮಸೂದೆ ಕೇವಲ ರೈತರನ್ನು ಶೋಷಿಸುವ ಮಧ್ಯವರ್ತಿಗಳ ಹಾವಳಿಯನ್ನಷ್ಟೇ ತೊಲಗಿಸುತ್ತಿಲ್ಲ. ಭಯೋತ್ಪಾದಕ, ವಿಚ್ಛಿದ್ರಕಾರಿ ಶಕ್ತಿಗಳ ಬುಡಕ್ಕೆ ಬೆಂಕಿ ಬೀಳುವಂತೆ ಮಾಡಿದೆಯೇ ?

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ