ಮೊದಲ ದಿನ ಪ್ರಶ್ನೋತ್ತರ ಕಲಾಪ, ಅಲ್ಪಕಲಾವ ಚರ್ಚೆ ಕಾಂಗ್ರೆಸ್ ನೆರೆ ಪ್ರಶ್ನೆಗಳಿಗೆ ಸರ್ಕಾರದ ಸೂಕ್ತ ಉತ್ತರ

ವಿಧಾನಮಂಡಲ: ಚಳಿಗಾಲದ ಅವೇಶನಕ್ಕೆ ಸೋಮವಾರ ಚಾಲನೆ ಸಿಕ್ಕಿದ್ದು, ಇತ್ತೀಚೆಗೆ ನಿಧನರಾದ ಗಣ್ಯರಿಗೆ ಉಭಯ ಸದನಗಳಲ್ಲಿಯೂ ಮೊದಲ ದಿನ ಸಂತಾಪ ಸೂಚಿಸಲಾಯಿತು. ಬಳಿಕ ಸಮಾವೇಶಗೊಂಡ ಸದನದಲ್ಲಿ ಪ್ರಶ್ನೋತ್ತರ ಕಲಾಪ, ಅಲ್ಪಕಲಾವ ಚರ್ಚೆಗಳು ನಡೆದವು.
ಅದರಲ್ಲಿಯೂ ನೆರೆ ಪರಿಹಾರಕ್ಕೆ ಸಂಬಂಸಿದಂತೆ ಮೇಲ್ಮನೆ ಮತ್ತು ಕೆಳಮನೆಗಳಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು, ವಿಷಯ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಿಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದವು. ಆದರೆ, ಸಮರ್ಪಕ ರೀತಿಯಲ್ಲಿ ಉತ್ತರ ನೀಡಿದ ಆಡಳಿತಾರೂಢ ಸಚಿವರು, ನೆರೆ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಟ್ಟಿರುವ ಪರಿಹಾರದ ಮಾಹಿತಿಯನ್ನು ಬಿಚ್ಚಿಟ್ಟರು.
ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ
ಇನ್ನು ಪ್ರಮುಖವಾಗಿ ಸೋಮವಾರ ಸದನದಲ್ಲಿ ಸಂತಾಪ ಸೂಚಕ ನಿರ್ಣಯ ಅನುಮೋದಿಸಿದ ಬಳಿಕ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊರೋನಾ ಸಕ್ರಿಯವಾಗಿದೆ. ಕೊರೋನಾ ಹೋಗಿಲ್ಲ. ಈಗಾಗಲೇ ಎರಡನೇ ಅಲೆ ಪ್ರಾರಂಭವಾಗುತ್ತಿದೆ. ಸದನದಲ್ಲಿ ಪ್ರತಿಯೊಬ್ಬರು ಮಾಸಕ್ಧ ರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಬಳಸಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಕೊರೋನಾ ಕುರಿತಂತೆ ಜಾಗೃತಿ ವಹಿಸಿಕೊಳ್ಳಬೇಕು. ಅನಾರೋಗ್ಯವಿದ್ದರೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವೈದ್ಯರ ತಂಡ ಇದೆ. ತಪಾಸಣೆ ಮಾಡಿಸಿಕೊಳ್ಳಬೇಕು. ಸದನದಲ್ಲಿ ಗುಂಪಾಗಿ ನಿಂತು ಮಾತನಾಡಬಾರದು. ಸದಸ್ಯರ ಅಥವಾ ಸಚಿವರ ಜೊತೆ ಮಾತನಾಡಬೇಕೆಂದರೆ ಸದನದ ಹೊರಗೆ ಮಾತನಾಡಿ ಸದನದ ಶಿಸ್ತು ಪಾಲಿಸಿ. ಸ್ವಯಂಶಿಸ್ತಿನಿಂದ ವೈಯಕ್ತಿಕ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ