ಬಲವಂತದ ಮತಾಂತರ: 10ವರ್ಷ ಸಜೆ 1ಲಕ್ಷ ರೂ.ದಂಡ : ಚೌಹಾಣ್

ಭೋಪಾಲ್:ಲವ್ ಜಿಹಾದ್ ಕಡಿವಾಣಕ್ಕೆ ಉತ್ತರಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿರುವ ಬೆನ್ನಲ್ಲೆ,ಮಧ್ಯಪ್ರದೇಶದಲ್ಲೂ ಬಲವಂತ ಮತಾಂತರ ವಿರುದ್ಧದ ರಚಿಸಲಾಗಿರು ವ ಕರಡು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು,ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಸಂಬಂಸಿದಂತೆ ಉನ್ನತ ಮಟ್ಟದ ಸಭೆಯನ್ನೂ ನಡೆಸಿದ್ದಾರೆ.
ಮದುವೆ ಉದ್ದೇಶಕ್ಕಾಗಿ ಅಥವಾ ವಂಚಿಸಿ ಮತಾಂತರಗೊಳಿಸುವ ಅಪರಾಧಗಳಿಗೆ 1 ಲಕ್ಷ ದಂಡ ಹಾಗೂ 10ವರ್ಷ ಜೈಲು ಶಿಕ್ಷೆ ವಿಸುವ ಪ್ರಸ್ತಾಪ ಹೊಂದಿರುವ ಧರ್ಮಸ್ವಾತಂತ್ರ್ಯ ಮಸೂದೆ 2020ರ ಮಂಡನೆ ವಿಚಾರವಾಗಿ ಈ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಪ್ರಸ್ತಾವಿತ ಶಾಸನವು ರಾಜ್ಯದ ಭೇಟಿ ಬಚಾವೋ ಅಭಿಯಾನದ ಒಂದು ಭಾಗ ಎಂದು ಹೇಳಿದ್ದಾರೆ.
ಅಲ್ಲದೆ,ಲವ್ ಜಿಹಾದ್ ಎಂದು ಕರೆಯಲಾಗುವ ಮತಾಂತರದ ಮದುವೆಗಳು,ಬಲವಂತ ಹಾಗೂ ವಂಚಿಸಿ ಆಗುವ ಮದುವೆಗಳನ್ನು ಅನೂರ್ಜಿತಗೊಳಿಸುವ ವಿಚಾರವನ್ನು ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ. ಇನ್ನುಮುಂದೆ ಯಾರೊಬ್ಬರು ಆಮಿಷವೊಡ್ಡಿ,ಬೆದರಿಸಿ,ಬಲವಂತದಿಂದ ಯಾರನ್ನೂ ಮತಾಂತರಗೊಳಿಸಲು ಸಾಧ್ಯವಿಲ್ಲ .ನೂತನ ಮಸೂದೆ ಕಾಯ್ದೆಯಾದ ಬಳಿಕ ಈ ಎಲ್ಲ ಅವ್ಯವಹಾರಗಳು ಅಂತ್ಯವಾಗಲಿದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ