ಲವ್ ಜಿಹಾದ್ ಮಾಡಿದ್ರೆ ಖಂಡಿತಾ ನಾಶವಾಗುತ್ತೀರಿ’: ಎಂಪಿ ಸಿಎಂ ಗುಡುಗು

(ಮಧ್ಯ ಪ್ರದೇಶ): ‘ಲವ್ ಜಿಹಾದ್ನಂತಹ ಕೃತ್ಯಗಳನ್ನು ಮಾಡಿದರೆ ಖಂಡಿತಾ ನೀವು ನಾಶವಾಗುತ್ತೀರಿ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಸೆಹೋರ್ ಜಿಲ್ಲೆಯಲ್ಲಿ ಯೋಜನೆಯೊಂದರ ಉದ್ಘಾಟನೆ ವೇಳೆ ಕೆಲವು ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು ”ನಮ್ಮ ಹೆಣ್ಣು ಮಕ್ಕಳೊಡನೆ ಅಸಹ್ಯವಾಗಿ ವರ್ತಿಸುವುದನ್ನು ನಾನು ಸಹಿಸುವುದಿಲ್ಲ” ಅಂಥವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಸರ್ಕಾರ ಎಲ್ಲಾ ಜಾತಿಯವರಗೂ, ಎಲ್ಲ ಧರ್ಮದವರಿಗೂ ಸೇರಿದ್ದು, ಬಲವಂತದ ಮತಾಂತರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಶಿವರಾಜ್ ಸಿಂಗ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮಧ್ಯ ಪ್ರದೇಶ ಸರ್ಕಾರ ಧರ್ಮ್ ಸ್ವಾತಂತ್ರ್ಯ ಮಸೂದೆ- 2020 ಮಂಡಿಲಸು ಚಿಂತನೆ ನಡೆಸುತ್ತಿದೆ ಎಂದು ಸಚಿವ ನರೋತ್ತಮ್ ಮಿಶ್ರಾ ಹೇಳಿಕೆ ನೀಡಿದ್ದು, ಈ ಮಸೂದೆಯಲ್ಲಿ ಲವ್ ಜಿಹಾದ್ ಕುರಿತು ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಲಾಗಿದೆ.
ಸದ್ಯಕ್ಕೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಬಲವಂತದ ಮತಾಂತರವನ್ನು ತಡೆಯುವ ಸಲುವಾಗಿ ಸುಗ್ರೀವಾಜ್ಞೆ ಹೊರಡಿಸಿದ್ದು, ಅಂತಧರ್ಮೀಯ ವಿವಾಹಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಕೂಡಾ ಪ್ರಕಟಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ